ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿ ದಾಖಲೆಯ 750ನೇ ಸಾಂಸ್ಕೃತಿಕ ವೈಭವ

ಉಡುಪಿ : ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ, ವಿಶ್ವಗೀತಾ ಪರ್ಯಾಯದ ಅಂಗವಾಗಿ ರಾಜಾಂಗಣ, ಮಧ್ವ ಮಂಟಪದಲ್ಲಿ 18.1.24 ರಿಂದ 30.3.25ರ ತನಕ 749 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, 31.3.25 ರಂದು ರಾಜಾಂಗಣದಲ್ಲಿ 750ನೇ ಕಾರ್ಯಕ್ರಮವಾದ ಬೆಂಗಳೂರಿನ ನಟೇಶ ನೃತ್ಯಾಲಯದ, ಶ್ರೀಮತಿ ನಯನಾ ಅನಂದನ್ ಹಾಗೂ ಬಳಗದವರಿಂದ ಶ್ರೀ ಕೃಷ್ಣ ಎನ್ನುವ ನೃತ್ಯ ನಾಟಕದ ಪ್ರದರ್ಶನಕ್ಕೆ ಶ್ರೀ ಶ್ರೀ ಸುಗುಣೇಂದ್ರ ಶ್ರೀಗಳವರು ಚಾಲನೆ ನೀಡಿದರು.

ರಾಜಾಂಗಣದಲ್ಲಿ ಹಾಗೂ ಮಧ್ವಮಂಟ‌ಪದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣರ ಸಾನ್ನಿಧ್ಯ‌ದಲ್ಲಿ ಕಲಾ ಸೇವೆ ಮಾಡುವುದರಿಂದ ಕಲಾವಿದರ ಇಷ್ಟಾರ್ಥಗಳು ನೆರವೇರುವುದು ಎಂದು ಆಶೀರ್ವದಿಸಿ ಎಲ್ಲಾ ಕಲಾವಿದರಿಗೂ ಕೋಟಿ ಗೀತಾ ಧೀಕ್ಷೆಯೊಂದಿಗೆ ಅನುಗ್ರಹಿಸಿದರು.

Related posts

ಗ್ರಾಮೀಣ ಬಂಟರ ಸಂಘದ ಸ್ಕಿಲ್ ಡೆವೆಲಪ್ಮೆಂಟ್ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ

ಉಗ್ರರನ್ನು ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪತ್ರಕರ್ತ ಸಂದೀಪ್ ಪೂಜಾರಿಗೆ ಶ್ರದ್ಧಾಂಜಲಿ ಸಭೆ