ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ

ಮಂಗಳೂರು : ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಮಂಗಳವಾರದಂದು ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ನಟ-ನಿರ್ದೇಶಕ ಉಪೇಂದ್ರ ಭೇಟಿ ನೀಡಿ, ಡಿ.20 ರಂದು ತೆರೆ ಕಾಣಲಿರುವ ತನ್ನದೇ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯ ಸಿನೆಮಾ “UI”ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು ಬಹು ನಿರೀಕ್ಷಿತ “UI”ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಬಂದಿದ್ದೇವೆ. ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರವು ಪೃಕೃತಿಗೆ ಹತ್ತಿರವಾಗಿದ್ದು, ದೈವದ ಹೆಸರಲ್ಲಿ ಇಲ್ಲಿ ಪೃಕೃತಿಯ ಆರಾಧನೆಯಾಗುತ್ತಿದೆ. ಕೊರಗಜ್ಜನ ದಯೆಯು ನಮ್ಮ ಮೇಲಿರಲಿ ಎಂದರು.

ಕುತ್ತಾರು ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್‌ನ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ನಟ ಉಪೇಂದ್ರ ಅವರನ್ನ ಕ್ಷೇತ್ರದ ಪರವಾಗಿ ಅಭಿನಂದಿಸಿದರು.

UI ಚಿತ್ರದ ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್, ಲಹರಿ ವೇಲು, ನವೀನ್ ಮನೋಹರ್ ಮತ್ತು ರಾಜೇಶ್ ಭಟ್ ಜತೆಗಿದ್ದರು.

Related posts

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ : 24 ಗಂಟೆಯೊಳಗೆ ಮೂವರು ಆರೋಪಿಗಳು ಅರೆಸ್ಟ್