ರವಿರಾಜ್ ಎಚ್ ಪಿ ಹಾಗೂ ಶಶಿರಾಜ್ ಕಾವೂರ್ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ

ಉಡುಪಿ : ನಮ‌ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ, ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ಗುರುವಾರ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಿಜಿಕೆ ರಂಗ ಪುರಸ್ಕಾರ-2024‌ನ್ನು ರಂಗಕರ್ಮಿಗಳಾದ ಉಡುಪಿಯ ರವಿರಾಜ ಎಚ್‌ಪಿ ಮತ್ತು ಮಂಗಳೂರಿನ ಶಶಿರಾಜ್ ಕಾವೂರು ಅವರಿಗೆ ಹಿರಿಯ ವಿದ್ವಾಂಸ ನಾಡೋಜ ಡಾ. ಕೆ. ಪಿ. ರಾವ್ ಅವರು ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ರಂಗಭೂಮಿಯಿಂದ ಸಾಮಾಜಿಕ ಬದಲಾವಣೆಯಾಗುತ್ತದೆ. ಬಿ ವಿ ಕಾರಂತರಂತಹ ಶ್ರೇಷ್ಠ ಕಲಾವಿದರ ರಂಗಭೂಮಿ ಕ್ಷೇತ್ರದ ಕೊಡುಗೆ ಬಗ್ಗೆ ಮಾತನಾಡಿದರು.

ತುಳುಕೂಟ ಉಡುಪಿಯ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮತ್ತು ಕಲಾವಿದ ಮೈಮ್ ರಾಮದಾಸ್ ಅವರು ಸಿಜಿಕೆ‌‌‌ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೈ,‌ ರಂಗಕರ್ಮಿ, ನಮ ತುಳುವೆರ್ ಕಲಾ ಸಂಘಟನೆಯ ಸುಕುಮಾರ್, ಮೋಹನ್ ಮುದ್ರಾಡಿ ಉಪಸ್ಥಿತರಿದ್ದರು.‌ ರಾಜೇಶ್ ಭಟ್ ಪಣಿಯಾಡಿ ವಂದಿಸಿ, ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ