ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಯುವತಿಯ ಅತ್ಯಾಚಾರ – ಕಾಮುಕ ಅರೆಸ್ಟ್

ಬಂಟ್ವಾಳ : ಶಾಲಾ ವಾರ್ಷಿಕೋತ್ಸವಕ್ಕೆಂದು ಬಂದಿದ್ದ ಯುವತಿಯನ್ನು ಕಾಮುಕನೋರ್ವನು ಶಾಲಾ ಕೊಠಡಿಯಲ್ಲಿಯೇ ಕೂಡಿಹಾಕಿ ಬಲವಂತದಿಂದ ಅತ್ಯಾಚಾರ ‌ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಾವೂರ ನಿವಾಸಿ ಜಯಂತ ಬಂಧಿತ ಕಾಮುಕ.

ಡಿ.14ರಂದು ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವಿತ್ತು. ಅಂದು ಕಾರ್ಯಕ್ರಮ ನೋಡಲು ಮನೆಯವರೊಂದಿಗೆ ಯುವತಿ ಶಾಲೆಗೆ ಬಂದಿದ್ದಳು. ಈ ವೇಳೆ ಆರೋಪಿ ಜಯಂತ ಶಾಲಾ ಕೊಠಡಿಯಲ್ಲಿ ಯುವತಿಯನ್ನು ಕೂಡಿ ಹಾಕಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಾನೆ.

ಈ ಬಗ್ಗೆ ಯುವತಿಯ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಗ್ರಾಮಾಂತರ ಎಸ್.ಐ. ಹರೀಶ್ ಹಾಗೂ ಪೋಲೀಸ್ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related posts

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ; ನಾಲ್ವರು ಅರೆಸ್ಟ್

ರಸ್ತೆಗೆ ಮೋರಿ ಅಡ್ಡವಾಗಿಟ್ಟ ಕಿಡಿಗೇಡಿಗಳು; ಮೋರಿಗೆ ಢಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯ

ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ : ದಿನೇಶ್ ಗುಂಡೂರಾವ್ ಘೋಷಣೆ