ಯುವತಿಯ ಅತ್ಯಾಚಾರ ಪ್ರಕರಣ : ಅಲ್ತಾಫ್, ಝೇವಿಯರ್ ಬಂಧನ; ಮತ್ತೋರ್ವನಿಗಾಗಿ ಪೊಲೀಸರಿಂದ ಶೋಧ

ಕಾರ್ಕಳ : ಕಾರ್ಕಳದಲ್ಲಿ ಶುಕ್ರವಾರ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು ಈ ಸಂಬಂಧ ಆರೋಪಿ ಅಲ್ತಾಫ್ ಎಂಬಾತನ ಬಂಧನವಾಗಿದೆ. ಆತನಿಗೆ ಸಹಕರಿಸಿದ ಝೇವಿಯರ್ ಕ್ವಾಡ್ರಸ್ ಎಂಬಾತನನ್ನೂ ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆರೋಪಿ ಬಿಯರ್‌ನಲ್ಲಿ ಅಮಲು ಪದಾರ್ಥ ಮಿಶ್ರಣ ಮಾಡಿ ಕೊಟ್ಟು ಯುವತಿಯ ಅತ್ಯಾಚಾರ ಮಾಡಿದ್ದಾಗಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ.

ಇವತ್ತು ಕಾರ್ಕಳ ಬಿಜೆಪಿ ಡಿ‌ವೈಎಸ್‌ಪಿ‌ಗೆ ಅವರಿಗೆ ಮನವಿ ಸಲ್ಲಿಸಿತು. ಮಹಿಳೆಯರಿಗೆ, ಯುವತಿಯರಿಗೆ ಇಲಾಖೆ ರಕ್ಷಣೆ ಕೊಡಬೇಕು‌.
ಸಮಾಜಘಾತುಕ ಶಕ್ತಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು‌. ಕಾರ್ಕಳದಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಬಿಜೆಪಿ ಮುಖಂಡರು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಡಿವೈಎಸ್ಪಿ
ಘಟನೆ ನಡೆದ ತಕ್ಷಣ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ತನಿಖೆ ನಡೆಸಿ ವಿಳಂಬ ಮಾಡದೆ ಆರೋಪಿಗಳ ವಿರುದ್ದ ಕ್ರಮ ಜರುಗಿಸುತ್ತೇವೆ ಎಂದು ಡಿವೈಎಸ್ಪಿ ಬಿಜೆಪಿ ಮುಖಂಡರಿಗೆ ಭರವಸೆ ನೀಡಿದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ