ಪಿಲಿಕುಲ ನಿಸರ್ಗಧಾಮದಲ್ಲಿ‌ 2 ಮರಿಗಳಿಗೆ ಜನ್ಮ ನೀಡಿದ ರಾಣಿ ಹುಲಿ

ಮಂಗಳೂರು : ಪಿಲಿಕುಲ ಜೈವಿಕ ಉದ್ಯಾನವನದ ರಾಣಿ ಹುಲಿಯು ಎರಡು ಮರಿಗಳಿಗೆ ಜನ್ಮ ನೀಡಿದೆ.

14 ವರ್ಷದ ಹುಲಿ “ರಾಣಿ” ಹುಲಿಯು ಡಿಸೆಂಬರ್ 20ರಂದು ರಾತ್ರಿ ಎರಡು ಮರಿಗಳಿಗೆ ಜನ್ಮನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿದೆ. ಮೃಗಾಲಯದ ಅಧಿಕಾರಿಗಳು ಹುಲಿ ಹಾಗೂ ಮರಿಗಳ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದಾರೆ. ರಾಣಿಗೆ ಅಗತ್ಯ ಆಹಾರ ಮತ್ತು ಪೂರಕ ಆಹಾರ (Supplements)ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.

ರಾಣಿ ಹುಲಿಯು 2016ರಲ್ಲಿ ಐದು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿತ್ತು. ಬಳಿಕ 2021 ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತ್ತು. “ರಾಣಿ”ಯನ್ನು ಪ್ರಾಣಿ ವಿನಿಮಯದ ಮೂಲಕ ಬನ್ನೇರುಘಟ್ಟ ಮೃಗಾಲಯದಿಂದ ತರಲಾಗಿತ್ತು. ಈ ಸಂದರ್ಭ ಪಿಲಿಕುಲ ಮೃಗಾಲಯದಿಂದ ಒಂದು ಗಂಡು ಹುಲಿಯನ್ನು ನೀಡಲಾಗಿತ್ತು. ಈ ಮೂಲಕ ಪಿಲಿಕುಲ ಮೃಗಾಲಯದಲ್ಲಿ ಹುಲಿಗಳ ಸಂಖ್ಯೆ 10ಕ್ಕೇರಿದೆ. ಸದ್ಯ 4 ಗಂಡು ಮತ್ತು 4 ಹೆಣ್ಣು ಹುಲಿಗಳಿದೆ. ಈಗ ತಾನೇ ಹುಟ್ಟಿರುವ ಮರಿಗಳ ಲಿಂಗವನ್ನು ಎರಡು ತಿಂಗಳ ನಂತರ ಗುರುತಿಸಲಾಗುವುದು.

ಹುಲಿ ಮರಿಗಳಿಗೆ ಒಂದುವರೆ ತಿಂಗಳ ಬಳಿಕ ರೋಗ ನಿರೋಧಕ ಲಸಿಕೆಯನ್ನು ನೀಡಲಾಗುವುದು. ಅಲ್ಲಿವರೆಗೆ ಮರಿಗಳ ಆರೋಗ್ಯವು ಅತೀ ಸೂಕ್ಷ್ಮವಾಗಿರುವುದರಿಂದ ತುಂಬಾ ನಿಗಾವಹಿಸಬೇಕಾಗುತ್ತದೆ. ಅಗತ್ಯ ಸಿಬ್ಬಂದಿಯನ್ನು ಹೊರತು ಪಡಿಸಿ ಹುಲಿಗಳ ಮನೆಯ ಸಮೀಪಕ್ಕೆ ಯಾರು ಪ್ರವೇಶಿಸದಂತೆ ಆದೇಶವನ್ನು ನೀಡಲಾಗಿದೆ.

Related posts

ಅರ್ಧ ಗಂಟೆಯ ಗೂಳಿಕಾಳಗ – ಬೆಚ್ಚಿ ಬಿದ್ದ ಜನ, ರೋಮಾಂಚನ…

ಶ್ರೀ ಕೃಷ್ಣಮಠದಲ್ಲಿ ಗೀತೋತ್ಸವದ ಅಂಗವಾಗಿ ಭಗವದ್ಗೀತಾ ಯಜ್ಞ ಸಂಪನ್ನ

ಪತ್ರಕರ್ತರ ಸಂಘ ಕೊಡಮಾಡುವ ವಡ್ಡರ್ಸೆ ರಘುರಾಮ್ ಶೆಟ್ಟಿ ಪ್ರಶಸ್ತಿಗೆ ರವಿ ಹೆಗಡೆ ಆಯ್ಕೆ