ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಉಡುಪಿ : ಕರಾವಳಿ ಕರ್ನಾಟಕದ ರಂಗೋಲಿ ಕಲೆ ವಿಷಯದಲ್ಲಿ ಸಂಶೋಧನೆ ಮಾಡಿ, ರಂಗೋಲಿ ಕಲೆಯಲ್ಲಿ ವಿಶ್ವದಾಖಲೆ ಮಾಡಿದ್ದ ಭಾರತಿ ಮರವಂತೆ ಅವರಿಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಭಾರತಿ ಮರವಂತೆ ಅವರು ರಂಗೋಲಿ ಕಲಾ ಪ್ರದರ್ಶನ, ರಂಗೋಲಿ ಕ್ಯಾನ್‌ವಾಸ್ ಪೈಂಟಿಂಗ್, ರಂಗೋಲಿ ತರಬೇತಿ, ನಾಟಕ ಅಕಾಡೆಮಿಯಿಂದ ಕಲಾವಿದರ ಫೆಲೋಶಿಪ್, ರಂಗೋಲಿ ಕೃತಿಗಳು, ಪತ್ರಿಕೆಗಳಲ್ಲಿ ರಚಿಸಿದ ರಂಗೋಲಿ ಚಿತ್ರಗಳ ಪ್ರಕಟಣೆ, ರಂಗೋಲಿ ಪತ್ರಿಕೆ ಸಂಪಾದಕಿಯಾಗಿ ಹಲವು ಸಾಧನೆ ಮಾಡಿದ್ದಾರೆ. ಇವರು ತಮಿಳುನಾಡಿನಲ್ಲಿ ರಚಿಸಿದ್ದ ರಂಗೋಲಿ ಕಲೆ ಮೂಲಕ ವಿಶ್ವದಾಖಲೆಗೂ ಭಾಜನರಾಗಿದ್ದರು.

ರಾಜ್ಯದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗುರುರಾಜ ಹೊಸಕೋಟೆ, ಡಾ.ಸಿ.ಸೋಮಶೇಖರ, ಡಾ.ಎಸ್ ಬಾಲಾಜಿ, ಡಾ. ಅಲ್ಲಮಪ್ರಭು ಮಹಾಸ್ವಾಮಿ, ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಮತ್ತಿತರ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ