ಶ್ರೀಕೃಷ್ಣನಿಗೆ ಪರ್ಯಾಯ ಶ್ರೀಗಳಿಂದ ರಾಮನ ಅಲಂಕಾರ

ಉಡುಪಿ : ಶ್ರೀಕೃಷ್ಣಮಠದಲ್ಲಿ ರಾಮನವಮಿ ಪ್ರಯುಕ್ತ ರಾಮಾಯಣ ಪಾರಾಯಣ, ದೇವರಿಗೆ ವಿಶೇಷ ಪೂಜೆಗಳನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ನಡೆಸಿದರು.

ಇದೇ ವೇಳೆ ಪರ್ಯಾಯ ಶ್ರೀಗಳು ಶ್ರೀಕೃಷ್ಣನಿಗೆ ರಾಮನ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ಜಿಲ್ಲೆಯ ವಿವಿಧ ದೇವಸ್ಥಾನ ಮತ್ತು ಭಜನಾಮಂದಿರದಲ್ಲಿ ರಾಮನವಮಿ ಉತ್ಸವವನ್ನು ಆಚರಿಸಲಾಯಿತು.

ವಿವಿಧ ದೇವಸ್ಥಾನಗಳಲ್ಲಿ ಅಭಿಷೇಕ, ಅಲಂಕಾರ, ತೊಟ್ಟಿಲು ಪೂಜೆ, ಮಹಾಪೂಜೆಗಳನ್ನು ನಡೆಸಲಾಯಿತು. ಭಜನಮಂದಿರಗಳಲ್ಲಿ ವಿಶೇಷ ಭಜನೆಗಳು ಸಂಪನ್ನಗೊಂಡವು.

Related posts

ಗ್ರಾಮೀಣ ಬಂಟರ ಸಂಘದ ಸ್ಕಿಲ್ ಡೆವೆಲಪ್ಮೆಂಟ್ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ

ಉಗ್ರರನ್ನು ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪತ್ರಕರ್ತ ಸಂದೀಪ್ ಪೂಜಾರಿಗೆ ಶ್ರದ್ಧಾಂಜಲಿ ಸಭೆ