ಪಿಡಬ್ಲ್ಯುಡಿ ಕಂಟ್ರಾಕ್ಟರ್ ಮನೆ ದರೋಡೆ ಪ್ರಕರಣ – ಗ್ರಾಪಂ ಸದಸ್ಯನ ಸಹಿತ 10ಮಂದಿ ಅರೆಸ್ಟ್

ಮಂಗಳೂರು : ನಗರದ ಹೊರವಲಯದ ಉಳಾಯಿಬೆಟ್ಟು ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣವನ್ನು ಬೇಧಿಸಿರುವ ಮಂಗಳೂರು ಪೊಲೀಸರು ಕೇರಳ ಮೂಲದ ನಟೋರಿಯಸ್ ದರೋಡೆಕೋರರು ಸೇರಿದಂತೆ 10ಮಂದಿಯನ್ನು ಬಂಧಿಸಿದ್ದಾರೆ.

ನೀರುಮಾರ್ಗ ಗ್ರಾಪಂ ಸದಸ್ಯ ವಸಂತ ಕುಮಾರ್(42), ರಮೇಶ ಪೂಜಾರಿ(42), ರೇಮಂಡ್ ಡಿಸೋಜ(47), ಬಾಲಕೃಷ್ಣ ಶೆಟ್ಟಿ(48), ಜಾಕಿ‌ರ್(56), ವಿನೋಜ್(38), ಸಜೀಶ್ (32), ಸತೀಶ್ ಬಾಬು(44), ಶಿಜೋ ದೇವಸ್ಸಿ(38), ಬಿಜು(41) ಬಂಧಿತ ಆರೋಪಿಗಳು.

ವಸಂತ ಪೂಜಾರಿ ತನ್ನ ಪರಿಚಿತ ರೇಮಂಡ್ ಡಿಸೋಜನ ಬಳಿ ಪದ್ಮನಾಭ ಕೋಟ್ಯಾನ್ ಮನೆಯಲ್ಲಿ ಕೋಟಿಗಟ್ಟಲೆ ಹಣವಿದೆಯೆಂದು ಹೇಳಿದ್ದ. ಆತ ದರೋಡೆಗೆ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಕಾಸರಗೋಡಿನ ಪೈವಳಿಕೆಯ ಬಾಲಕೃಷ್ಣ ಶೆಟ್ಟಿ ಮತ್ತು ಕೇರಳ ಮೂಲದ ಕೆಲ ಆರೋಪಿಗಳನ್ನು ಸಂಪರ್ಕಿಸಿ 300ಕೋಟಿ ಹಣವಿದೆ ಎಂದು ಹೇಳಿದ್ದ. ಆದ್ದರಿಂದ ದರೋಡೆಗೆ 7ತಿಂಗಳಿನಿಂದ ಸ್ಕೆಚ್ ಹಾಕಲಾಗಿತ್ತು. ಮನೆಯ ಸಂಪೂರ್ಣ ಸ್ಕೆಚ್, ಮನೆಯಲ್ಲಿ ಯಾರೆಲ್ಲಾ ಇದ್ದಾರೆಂಬ ಮಾಹಿತಿಯನ್ನು ವಸಂತ ಪೂಜಾರಿ ನೀಡಿದ್ದ.

ಜೂನ್ 21ರಂದು ಸಂಜೆ ದರೋಡೆಕೋರರ ಕೃತ್ಯ ಎಸಗಲಾಗಿತ್ತು. ಯಾವುದೇ ಸುಳಿವು ಇರದ ಕಾರಣ ಪೊಲೀಸರಿಗೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ತನಿಖೆ ವೇಳೆ ಪದ್ಮನಾಭ ಕೋಟ್ಯಾನ್ ಅವರ ಲಾರಿ ಚಾಲಕ ವಸಂತ ಪೂಜಾರಿ ಮೇಲೆ ಶಂಕೆ ವ್ಯಕ್ತವಾಗಿತ್ತು. ಆರಂಭದಲ್ಲಿ ಬಂಟ್ವಾಳ ಮೂಲಕ ದರೋಡೆಕೋರರ ಕಾರು ತೆರಳಿರುವ ಸುಳಿವು ದೊರಕಿದ್ದು, ತಲಪಾಡಿ ಮೂಲಕ ಆರೋಪಿಗಳು ಪರಾರಿಯಾಗಿದ್ದು ತಿಳಿದುಬಂದಿತ್ತು.

ಇದೀಗ ಪೊಲೀಸರು 10ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 9 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ನಾಲ್ವರು ಆರೋಪಿಗಳನ್ನು ನಿನ್ನೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇಂದು 6ಮಂದಿಯನ್ನು ಬಂಧಿಸಲಾಗಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ