ಪುತ್ತೂರು ನಗರ ಪೊಲೀಸ್ ಠಾಣೆ ನಿವೃತ್ತ ASI ಕೃಷ್ಣ ಶೆಟ್ಟಿ ನಿಧನ

ಪುತ್ತೂರು : ನಗರ ಪೊಲೀಸ್ ಠಾಣೆಯಲ್ಲಿ ASI ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಕೃಷ್ಣ ಶೆಟ್ಟಿ ನಿಧನರಾಗಿದ್ದಾರೆ.

ಕೃಷ್ಣ ಶೆಟ್ಟಿ (70)ಅವರು ಅ.22 ನಸುಕಿನ ಜಾವ ಬೆಂಗಳೂರಿನಲ್ಲಿ ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮರ್ದಾಳ ಮೂಲದವರಾದ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ನಿವೃತ್ತಿಗೊಂಡಿದ್ದರು. ಬಳಿಕ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು.

ಮೃತರು ಪತ್ನಿ ಮಂಜುಳಾ ಶೆಟ್ಟಿ, ಪುತ್ರರಾದ ವಿಜೇಶ್ ಶೆಟ್ಟಿ, ಅರುಣ್ ಶೆಟ್ಟಿ ಮತ್ತು ಪುತ್ರಿ ದೀಪಿಕಾ ಶೆಟ್ಟಿ, ಸೊಸೆ ನಿಶಾ, ಅಳಿಯ ಸಂತೋಷ್ ಶೆಟ್ಟಿ, ಮೊಮ್ಮಗ ಹಾಗು ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ