ರಾಜಾಂಗಣದಲ್ಲಿ ಕೈಮಗ್ಗ ಮೇಳಕ್ಕೆ ಪುತ್ತಿಗೆ ಶ್ರೀಪಾದರಿಂದ ಚಾಲನೆ

ಉಡುಪಿ : ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ವತಿಯಿಂದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಕೈಮಗ್ಗ ಸೀರೆಗಳ ಮೌಲ್ಯವರ್ಧನೆ ಮತ್ತು ಉನ್ನತೀಕರಣಕ್ಕಾಗಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಶ್ರೀಕೃಷ್ಣಮಾಸೋತ್ಸವ ಪ್ರಯುಕ್ತ ರಾಜಾಂಗಣದಲ್ಲಿ ಅ. 11ರ ವರೆಗೆ ಹಮ್ಮಿಕೊಂಡಿರುವ ಕೈಮಗ್ಗ ಸೀರೆಗಳ ಉತ್ಸವ – 2024ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚಾಲನೆ ನೀಡಿ ಅನುಗ್ರಹಿಸಿದರು.

ಪೌರಾಯುಕ್ತ ರಾಯಪ್ಪ, ಉಡುಪಿ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್‌, ಡೆಂಟಾ ಕೇರ್‌ನ ಡಾ| ವಿಜಯೇಂದ್ರ ರಾವ್‌, ಉಜ್ವಲ್‌ ಡೆವಲಪರ್‌ನ ಅಜಯ್‌ ಪಿ.ಶೆಟ್ಟಿ, ಪಾಟೀಲ್‌ ಸ್ಟೋರ್‌ನ ಗಣೇಶ್‌ ಪಾಟೀಲ್‌, ನಗರಸಭೆ ಸದಸ್ಯರಾದ ರಜನಿ ಹೆಬ್ಬಾರ್‌, ಟಿ.ಜಿ. ಹೆಗ್ಡೆ, ಉದ್ಯಮಿ ಹರಿಯಪ್ಪ ಕೋಟ್ಯಾನ್‌, ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ರಮೇಶ್‌ ಭಟ್‌, ಉಪಾಧ್ಯಕ್ಷರಾದ ಮಂಜುನಾಥ ಮಣಿಪಾಲ, ಸರೋಜಾ ಯಶವಂತ್‌, ಕಾರ್ಯದರ್ಶಿ ಅವಿನಾಶ್‌ ಮಾರ್ಪಳ್ಳಿ, ಪದಾಧಿಕಾರಿಗಳಾದ ಅಶೋಕ್‌ ಶೆಟ್ಟಿಗಾರ್‌ ಅಲೆವೂರು, ವಿಟ್ಠಲ ಶೆಟ್ಟಿಗಾರ್‌, ರಾಜಕೇಸರಿ, ಶ್ರೀನಿವಾಸ ಶೆಟ್ಟಿಗಾರ್‌ ಬೈಲೂರು ಉಪಸ್ಥಿತರಿದ್ದರು.

Related posts

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ

ಕಡಿದು ಬಿಸಾಡಿದ ಬಾಳೆ ದಿಂಡಿನಲ್ಲಿ ಚಿಗುರುಡೆದ ಬಾಳೆಗೊನೆ