“ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಮಂಜೊಲು ಜುಮಾದಿ ದೈವದ ಭತ್ತದ ಕೃಷಿ ನಾಟಿಗೆ ಚಾಲನೆ “

ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಧೂಮಾವತೀ ದೈವದ ಪಾರಂಪರಿಕ ಜೋಡು ಬಂಡಿ ಪೂಕರೆ ಎಳೆಯುವ ಕಂಬಳದ ಗದ್ದೆಗೆ ಪಾರಂಪರಿಕ ನೆಲೆಯಲ್ಲಿ ಕಂಬಳದ ಗದ್ದೆಗೆ ಹಾಲು ಶಿಯಾಳ ಸಮರ್ಪಸಿ ದೈವದ ಪ್ರಸಾದವನ್ನು ಹಾಕಿ ಎನೆಲು ಭತ್ತದ ಕೃಷಿಗೆ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಯಜಮಾನರಾದ ಕೆ. ಪಿ. ಸಂತೋಷ್ ಕುಮಾರ್ ಎಂ. ಶೆಟ್ಟಿಯವರು ಚಾಲನೆ ನೀಡಿದರು.

ಈ ಗದ್ದೆಯು ಪಾರಂಪರಿಕ ಹಿನ್ನಲೆಯನ್ನು ಹೊಂದಿದ್ದು ಈ ಗದ್ದೆಗೆ ಸೂತಕದವರು ಸ್ವ-ಇಚ್ಛೆಯಿಂದ ಅದರ ಪಾವಿತ್ರತೆ ಕಾಪಾಡುವ ದೃಷ್ಟಿಯಿಂದ ಗದ್ದೆಗೆ ಇಳಿಯುವುದಿಲ್ಲ. ಈ ಗದ್ದೆಯಲ್ಲಿ ಎನೆಲು (ಕಾರ್ತಿ ಕೃಷಿ) ಕೊಳಕೆ ಎಂಬ ಎರಡು ಬೆಳೆಯನ್ನು ಮಾಡಲಾಗುತ್ತದೆ. ಕೊಳಕೆ ಕೃಷಿಯನ್ನು ಫೆಬ್ರವರಿ 5ರಂದು ಕಂಬಳೋತ್ಸವ ನಡೆದು ರಾತ್ರಿ ಜೋಡು ಬಂಡಿ ಪೂಕರೆ ಬಂದಿಯನ್ನು ಎಳೆದು ಕಟ್ಟೆಯಲ್ಲಿ ನಿಲ್ಲಿಸಲಾಗುವುದು. ಮರು ದಿವಸ ಫೆಬ್ರವರಿ 6ರಂದು ಬೆಳಿಗ್ಯೆ ಮಂಜೊಟ್ಟಿ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ದೈವದ ನೇಮೊತ್ಸವ ಪ್ರಾರಂಭವಾಗುವ ಮೊದಲು ಕಂಬಳ ಗದ್ದೆಗೆ ಊರ ಮಹಿಳೆಯರು ನಾಟಿ ಮಾಡುತ್ತಾರೆ. ಈ ಸಂಧರ್ಭದಲ್ಲಿ ದೈವವು ಮಂಜೊಟ್ಟಿ ದೈವಸ್ಥಾನದಿಂದ ನೇಮೊತ್ಸವದ ಮುಖಾಂತರ ದೃಷ್ಟಿ ಹಾಯಿಸುವುದು. ನೇಮೊತ್ಸವ ಮುಗಿಯುವ ಮೊದಲು ಎರಡು ಕಂಬಳ ಗದ್ದೆಯ ನಾಟಿಯನ್ನು ಮುಗಿಸಿ ಮಹಿಳೆಯರು ದೈವದ ಪ್ರಸಾದವನ್ನು ಸ್ವೀಕರಿಸುತ್ತಾರೆ. ಇದು ಪುರಾತನದಿಂದ ಬಂದ ಪದ್ದತಿ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ