ಉಗ್ರದಾಳಿ ಖಂಡಿಸಿ ಬೈಂದೂರಿನಲ್ಲಿ ಪ್ರತಿಭಟನೆ

ಬೈಂದೂರು : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೈಂದೂರು ಮಂಡಲ ವತಿಯಿಂದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಧರ್ಮಾಧಾರಿತ ನರಮೇಧವನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಯುವಮೋರ್ಚಾ ಬೈಂದೂರು ಮಂಡಲ ಅಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ ಅವರ ನೇತೃತ್ವದಲ್ಲಿ ಉಪ್ಪುಂದ‌ದ ಕಾರ್ಯಕರ್ತರ ಕಚೇರಿಯಲ್ಲಿ ಪ್ರತಿಭಟನೆ ನಡೆಯಿತು.

ಈ ವಿದ್ವಂಸಕ ಘಟನೆಯನ್ನು ಉದ್ದೇಶಿಸಿ ಬೈಂದೂರಿನ ಶಾಸಕದಾದ ಗುರುರಾಜ ಗಂಟಿಹೊಳೆ ಅವರು ಮತಾಂಧ ಇಸ್ಲಾಮಿಕ್ ಭಯೋತ್ಪಾದಕರಿಗೆ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ, ಒಬಿಸಿ ಮೋರ್ಚಾ ಅಧ್ಯಕ್ಷ ಶಿವರಾಜ್ ಪೂಜಾರಿ, ಎಸ್ಸಿ ಮೋರ್ಚಾ ಅಧ್ಯಕ್ಷ ಅಶೋಕ್, ಬಿಜೆಪಿ ಜಿಲ್ಲಾ ಯುವ ಮೋರ್ಚ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ನೆಲ್ಯಾಡಿ, ಶಾಂತಿ ಖಾರ್ವಿ ಗಂಗೊಳ್ಳಿ, ಅಶೋಕ್ ದೇವಾಡಿಗ ಕಂಚಿಕಾನ್, ಕೃಷ್ಣ ಖಾರ್ವಿ ಕೊಡಿರಿ, ಅಶೋಕ್ ನಾಡ, ರವಿಚಂದ್ರ ವಿ. ಕೆ, ಗೋಪಾಲ್ ಪೂಜಾರಿ ವಸ್ರೆ, ದಿವಾಕರ್ ಶೆಟ್ಟಿ, ಪ್ರದೀಪ್ ಉಪ್ಪುಂದ, ಜಗದೀಶ್ ಆಲಂದೂರ್, ಅನುರ ಮೆಂಡನ್, ಜಯಂತ್ ಗಂಗೊಳ್ಳಿ, ಮಹೇಶ್ ಪೈ ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಬ್ರಹ್ಮಾವರದಲ್ಲಿ ತಕ್ಷಣ ಸರ್ವಿಸ್ ರಸ್ತೆ ಆರಂಭಿಸದೇ ಇದ್ದಲ್ಲಿ ಎ. 29 ರಂದು ಉಗ್ರ ಪ್ರತಿಭಟನೆ : ಅಲ್ವಿನ್ ಅಂದ್ರಾದೆ

ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು

ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಬಸ್ ನಿರ್ವಾಹಕ ಸಸ್ಪೆಂಡ್