ಚೇರ್ಕಾಡಿ ಗ್ರಾಪಂ ಬರ್ಖಾಸ್ತುಗೊಳಿಸುವಂತೆ ಆಗ್ರಹಿಸಿ ಧರಣಿ

ಬ್ರಹ್ಮಾವರ : ಜನವಿರೋಧಿ ನೀತಿ ಅನುಸರಿಸುತ್ತಿರುವ ಚೇರ್ಕಾಡಿ ಗ್ರಾಮ ಪಂಚಾಯತ್ ಬರ್ಖಾಸ್ತುಗೊಳಿಸುವಂತೆ ಆಗ್ರಹಿಸಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಸಮತಾ ಸೈನಿಕ ದಳ ಉಡುಪಿ ವತಿಯಿಂದ ಗ್ರಾ.ಪಂ ಎದುರು ಧರಣಿ ನಡೆಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದವರಿಗೆ ನೀಡ‌ಬೇಕಾದ ಸೌಲಭ್ಯವನ್ನು ನೀಡದೆ ವಂಚಿಸಿ ದೌರ್ಜನ್ಯ ಎಸಗಿರುವ ಪಿಡಿಒ ಅಮಾನತು ಮಾಡಬೇಕು. ಅನುದಾನ ಅವ್ಯವಹಾರ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಶಿರಿಯಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ಲೇಶ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.

Related posts

40 ಮರಾಠ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ

ವ್ಯಾಸರಾಜ ಶ್ರೀಗಳಿಂದ ಸಂಸ್ಥಾನ ಪೂಜೆ

ಮೀನು ವ್ಯಾಪಾರಿಗೆ 90 ಲಕ್ಷ ರೂ.ವಂಚನೆ – ದೂರು ದಾಖಲು