ವಿಜಯಪುರ ಜಿಲ್ಲೆಯ ಮನೆಯಿಂದ ಹೊರದಬ್ಬಲ್ಪಟ್ಟ ಬಾಲಕನ ರಕ್ಷಣೆ; ಬಾಲಭವನದಲ್ಲಿ ಪುನರ್ವಸತಿ

ಉಡುಪಿ : ಉಪ್ಪೂರಿನಲ್ಲಿ ಮನೆಯಿಂದ ಹೊರದಬ್ಬಲ್ಪಟ್ಟು ಅಸಹಾಯಕ ಸ್ಥಿತಿಯಲ್ಲಿದ್ದ ವಿಜಯಪುರ ಜಿಲ್ಲೆಯ ಬಾಲಕನನ್ನು ರಕ್ಷಿಸಿರುವ ಘಟನೆ ನಡೆದಿದೆ.

ರಕ್ಷಿಸಲ್ಪಟ್ಟ ಬಾಲಕ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಅಂಕ ಗಳಿಕೆಯಲ್ಲಿ ಹಿಂದಿದ್ದರಿಂದ ಪೋಷಕರಾಗಿರುವ ಚಿಕ್ಕಪ್ಪ, ಚಿಕ್ಕಮ್ಮ‌‌ ಮನೆಯಿಂದ ಹೊರದಬ್ಬಿದರೆಂದು ಬಾಲಕ ಹೇಳಿಕೊಂಡಿದ್ದಾನೆ. ವಿಜಯಪುರ ಜಿಲ್ಲೆಯ ಸಮರ್ಥ್ (14) ರಕ್ಷಣೆಗೊಳಗಾಗ ಬಾಲಕ. ಸದ್ಯ ಈತ ಉಡುಪಿಯ ಲಕ್ಷ್ಮೀನಗರದಲ್ಲಿ ವಾಸವಾಗಿದ್ದನೆಂದು ತಿಳಿದುಬಂದಿದೆ.

ಉಡುಪಿಯಿಂದ‌ ಸಾಸ್ತಾನಕ್ಕೆ ಬೈಕಿನಲ್ಲಿ ಸಾಗುತ್ತಿದ್ದ ಮನ್ಸೂರ್ ಎನ್ನುವವರಿಗೆ, ಉಪ್ಪೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಾಲಕ ಕಂಡುಬಂದಿದ್ದ. ಅವರು ವಿಚಾರಿಸಿದಾಗ ಬಾಲಕ ತನ್ನ ಅಸಹಾಯಕ ಸ್ಥಿತಿಯನ್ನು ಹೇಳಿಕೊಂಡಿದ್ದಾನೆ. ತಕ್ಷಣ ಮನ್ಸೂರ್ ಅವರು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರಿಗೆ ಮಾಹಿತಿ ನೀಡಿದ್ದು ಅವರ ಸಹಕಾರದಲ್ಲಿ ಕಾರ್ಯಾಚರಣೆ ನಡೆಯಿತು. ಬಳಿಕ ಬಾಲಕನಿಗೆ ಬಾಲಭವನದಲ್ಲಿ ಪುನರ್ವಸತಿ ಕಲ್ಪಿಸಲಾಯಿತು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ