ಅಮೆರಿಕಾದ ಬೋಸ್ಟನ್‌ನಲ್ಲಿ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟದಿಂದ ಎಕ್ಸ್ಪರ್ಟ್ ಸಂಸ್ಥೆಯ ಪ್ರೊ. ನರೇಂದ್ರ ಎಲ್. ನಾಯಕ್ ಹಾಗೂ ಡಾ. ಉಷಾಪ್ರಭಾ ಎನ್. ನಾಯಕ್ ಅವರ ಶೈಕ್ಷಣಿಕ ಸಾಧನೆಗಾಗಿ ಗೌರವ

ಅಮೆರಿಕಾದ ಬೋಸ್ಟನ್ ನಗರದಲ್ಲಿ ಇತ್ತೀಚೆಗೆ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ವತಿಯಿಂದ ಮಂಗಳೂರಿನ ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹಾಗೂ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರನ್ನು ಶೈಕ್ಷಣಿಕ ರಂಗದ ಅಭೂತಪೂರ್ವ ಸಾಧನೆಗಾಗಿ ಗೌರವಿಸಲಾಯಿತು.

ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಅಧ್ಯಕ್ಷ ಈರಪ್ಪ ಅರಭಾವಿ, ಕಾರ್ಯದರ್ಶಿ ಚನ್ನಬಸವಣ್ಣ ಗೌಡ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸತೀಶ್ ಸುದಿ, ಸೇವಾ ವಿಭಾಗದ ಮುಖ್ಯಸ್ಥ ರಘು ಮಾವಿನಹಳ್ಳಿ, ಜಯ ಕುಲಕರ್ಣಿ, ಶ್ರೀಧರ ಕುಲಕರ್ಣಿ, ಸಂದೇಶ ಭಟ್, ಸಹನಾ ಭಟ್ ಉಪಸ್ಥಿತರಿದ್ದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸಚಿವ ಜಾರಕಿಹೊಳಿ ಅವರಿಂದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ