ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಸಿಬ್ಬಂದಿ ಹೊಡೆದಾಟ – ಇಬ್ಬರ ಬಂಧನ, ಬಸ್ ಜಪ್ತಿ

ಮಣಿಪಾಲ : ಮಣಿಪಾಲ ಟೈಗರ್‌ ಸರ್ಕಲ್‌ ಬಳಿ ಖಾಸಗಿ ಬಸ್‌ ಸಿಬ್ಬಂದಿಗಳ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಸಂಜೆ ಮಣಿಪಾಲದ ಟೈಗರ್‌ ಸರ್ಕಲ್‌ ಬಳಿ ಇರುವ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸುವ ಟೈಮಿಂಗ್‌ ವಿಚಾರದಲ್ಲಿ ಇವರು ಹೊಡೆದಾಡಿಕೊಂಡಿದ್ದರು. ಮಂಜುನಾಥ್ ಬಸ್ ಚಾಲಕ, ಉಚ್ಚಿಲದ ಮೊಹಮ್ಮದ್‌ ಆಲ್ಪಾಜ್‌(25) ಮತ್ತು ಆನಂದ ಬಸ್ಸಿನ ಕಂಡಕ್ಟರ್‌ ವಿಜಯಕುಮಾರ್‌(25), ಚಿತ್ರದುರ್ಗ ಬಂಧಿತರು.

ಆನಂದ್‌ ಬಸ್‌‌ನ ಕಂಡಕ್ಟರ್‌ ವಿಜಯ ಕುಮಾರ್‌ ಹಾಗೂ ಮಂಜುನಾಥ ಬಸ್ಸಿನ ಚಾಲಕ ಮೊಹಮ್ಮದ್‌ ಆಲ್ಪಾಜ್‌ ನಡುವೆ ಗಲಾಟೆ ನಡೆದಿದ್ದು ಈ ಕುರಿತ ವಿಡಿಯೋ ವೈರಲ್ ಆಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಸ್‌ಗಳನ್ನೂ ಜಪ್ತಿ ಮಾಡಲಾಗಿದ್ದು ಮಣಿಪಾಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related posts

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರಾಗಿ ಆಸ್ಟ್ರೋ ಮೋಹನ್ ನೇಮಕ

ಕೆಎಂಸಿ ಉದ್ಯೋಗಿಯ ಮಾಂಗಲ್ಯ ಸರ ಎಗರಿಸಿದ ಆರೋಪಿ ಅರೆಸ್ಟ್

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಏಷ್ಯಾದ ಮೊದಲ ಮಾಮಾ ಅನ್ನಿ ಹೈ-ಫಿಡೆಲಿಟಿ ಬರ್ತಿಂಗ್ ಸಿಮ್ಯುಲೇಟರ್ ಪರಿಚಯ