ಕಂಟೈನರ್‌ಗೆ ಖಾಸಗಿ ಬಸ್ ಢಿಕ್ಕಿ – 20 ಮಂದಿಗೆ ಗಾಯ

ಪಡುಬಿದ್ರಿ : ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಂಟೈನರ್‌ಗೆ ಖಾಸಗಿ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಮಂದಿಗೆ ಗಾಯಗಳಾಗಿವೆ. ಓರ್ವರಿಗೆ ಮೂಳೆ ಮುರಿತವುಂಟಾಗಿದ್ದು ಎಲ್ಲರೂ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹೆಜಮಾಡಿಯ ಬಿಟ್ಟು ದಾಭಾದೆದುರಿನ ರಾಷ್ಟ್ರೀಯ ಹೆದ್ದಾರಿ 66ರ ತಿರುವೊಂದರಲ್ಲಿ ಈ ಅಪಘಾತವು ಸಂಭವಿಸಿದೆ.

ಗಾಯಾಳುಗಳನ್ನು ಭವಾನಿ, ಅಮೀನಾ, ಫಾತೀಮಾ, ಸಿಯಾ, ಸಚಿನ್‌, ಸನತ್‌ ಕುಮಾರ್‌, ಸಚಿನ್‌ ಎ., ಪೌಲ್‌, ಮಾತುಮ್‌, ಆನಂದ ಪ್ರಭು, ನಸೀಮ್‌ ಶೇಖ್‌, ಅಶೋಕ್‌, ನಂದನ, ಬಸ್‌ ಚಾಲಕ ವಿಕ್ರಮ್‌, ಸಿದ್ದು, ಅಮಿತ್‌, ಶಕುಂತಳಾ, ಪ್ರದೀಪ್‌, ಸುಮತಿ, ಈಶ್ವರಮೂರ್ತಿ ಎಂದು ಗುರುತಿಸಲಾಗಿದೆ. ಕಂಟೈನರ್‌ ಲಾರಿ ಚಾಲಕನು ಯಾವುದೇ ಮುನ್ಸೂಚನೆಗಳಿಲ್ಲದೇ ನಿಲ್ಲಿಸಿದಾಗ ಈ ಘಟನೆಯು ಸಂಭವಿಸಿದೆ. ಕಂಟೈನರ್‌ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು