ಹಿಂದುತ್ವ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿ : ಕಿಶೋರ್ ಕುಮಾರ್

ಮೂಡುಬಿದಿರೆ : ಹಿಂದುತ್ವ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿ ಪಕ್ಷ ಮತ್ತು ಕಾರ್ಯಕರ್ತರ ವ್ಯಕ್ತಿತ್ವಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಾಜಕಾರಣ ನಡೆಸುವುದಾಗಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ಮೂಡುಬಿದಿರೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ಕಾಮಧೇನು ಸಭಾಭವನದಲ್ಲಿ ನಡೆದ ವಿಧಾನ ಪರಿಷತ್ ಜನಪ್ರತಿನಿಧಿಗಳ ಕ್ಷೇತ್ರದ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸ್ಥಳೀಯಾಡಳಿತದ ಸದಸ್ಯರ ಭಾವನೆಗಳಿಗೆ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಜಾತಿ ರಾಜಕಾರಣದ ವೈಭವೀಕರಣದ ನಡುವೆಯು ಬಿಜೆಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದಾಗಿ ತಿಳಿಸಿ ಎಲ್ಲಾ ಜನಪ್ರತಿನಿಧಿಗಳು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮತದಾನ ಗೈಯುವಂತೆ ತಿಳಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ತನ್ನ ಕ್ಷೇತ್ರದಲ್ಲಿ ನಗರೋತ್ಥಾನ ಯೋಜನೆಯಡಿ ಮನೆಗಳ ಅಭಿವೃದ್ಧಿಗೆ ನೀಡಲಾದ ಅನುದಾನ, ದೇವಸ್ಥಾನಗಳಿಗೆ ನೀಡಲಾದ ಅನುದಾನ ಸೇರಿದಂತೆ ಹಲವಾರು ಪ್ರಗತಿ ಕಾರ್ಯಗಳ ಅನುದಾನಗಳನ್ನು ರಾಜ್ಯದ ಕಾಂಗ್ರೆಸ್ ಸರಕಾರ ಹಿಂಪಡೆದುಕೊಂಡಿದೆ. ಈ ಕೆಟ್ಟ ಸರಕಾರದ ನಡುವೆ ಜನರ ಒಲವನ್ನು ಸರಕಾರಕ್ಕೆ ತಿಳಿಸಿ ಬಿಸಿ ಮುಟ್ಟಿಸಲು ಕಿಶೋರ್ ಕುಮಾರ್‌ರಂತಹ ನಾಯಕರ ಅಗತ್ಯವಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಮಂಡಲ ಪ್ರಭಾರಿ ಜಯಂತ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷರಾದ ಶಾಂತಿಪ್ರಸಾದ್ ಹೆಗ್ಡೆ, ಸುನಿಲ್ ಆಳ್ವ, ಮಂಡಲ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ, ಹರಿಪ್ರಸಾದ್ ಶೆಟ್ಟಿ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಚುನಾವಣಾ ಜಿಲ್ಲಾ ಸಹಸಂಚಾಲಕ ರಾಕೇಶ್ ರೈ, ಉಸ್ತುವಾರಿ ಸಹ ಪ್ರಭಾರಿ ಹರೀಶ್ ಮೂಡುಶೆಡ್ಡೆ, ಯತೀಶ್ ಅರ್ವ, ಸತೀಶ್ ಅಂಚನ್, ಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್

ತಲವಾರು ಝಳಪಿಸಿದ ಪ್ರಕರಣ; ಇಬ್ಬರ ಸೆರೆ