ಆನ್‌ಲೈನ್ ಟಾಸ್ಕ್ ಮೂಲಕ ಹೆಚ್ಚಿನ ಲಾಭದ ನೆಪ – ಮಹಿಳೆಗೆ ಲಕ್ಷಾಂತರ ರೂ.ವಂಚನೆ

ಉಡುಪಿ : ಆನ್‌ಲೈನ್ ಟಾಸ್ಕ್ ಮೂಲಕ ಹೆಚ್ಚಿನ ಲಾಭ ಗಳಿಸುವ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲೀನಾ ಜೋಸೆಫ್(28) ಎಂಬವರಿಗೆ ಜೂ.17ರಂದು ಅಪರಿಚಿತರು ಮೊಬೈಲ್‌ಗೆ ಸಂದೇಶ ಕಳುಹಿಸಿ, ಟಾಸ್ಕ್ ಪಡೆದು ಹೆಚ್ಚು ಲಾಭಾಂಶವನ್ನು ಪಡೆಯಬಹುದು ಎಂಬುದಾಗಿ ನಂಬಿಸಿದ್ದರು. ಅದರಂತೆ ಇವರು ಆರೋಪಿ‌ಗಳ ವಿವಿಧ ಬ್ಯಾಂಕ್ ಖಾತೆಗಳಿಗೆ 6,63,244ರೂ. ಹಣ ಜಮೆ ಮಾಡಿದ್ದರು. ಆದರೆ ಆರೋಪಿಗಳು ಅದನ್ನು ವಾಪಾಸ್ಸು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ