ಅಣ್ಣನ ಉತ್ತರ ಕ್ರಿಯೆಯ ಸಿದ್ಧತೆ – ವಿದ್ಯುತ್‌ ಪ್ರವಹಿಸಿದ್ದ ಶಾಮಿಯಾನ ಕಂಬ ಸ್ಪರ್ಶಿಸಿ ತಂಗಿ ಸಾವು

ಕಾರ್ಕಳ : ಅಣ್ಣನ ಉತ್ತರ ಕ್ರಿಯೆ ಸಿದ್ಧತೆ ವೇಳೆ ವಿದ್ಯುತ್‌ ಪ್ರವಹಿಸುತ್ತಿದ್ದ ಶಾಮಿಯಾನ ಕಂಬ ಸ್ಪರ್ಶಿಸಿ ತಂಗಿ ಸಾವಿಗೀಡಾದ ದಾರುಣ ಘಟನೆ ಕಾರ್ಕಳ ತಾಲೂಕು ನಿಟ್ಟೆಯಲ್ಲಿ ಸಂಭವಿಸಿದೆ.

ನಿಟ್ಟೆ ಗ್ರಾಮದ ರಾಘು ಬೋಂಟ್ರ ಎಂಬವರು ನವೆಂಬರ್ 3ರಂದು ನಿಧನರಾಗಿದ್ದು, ಮೃತರ ಸದ್ಗತಿಗಾಗಿ ನ. 15ಕ್ಕೆ ಉತ್ತರ ಕ್ರಿಯೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ಧತೆ ನಡೆದಿದ್ದು ಗುರುವಾರ ರಾತ್ರಿ 9 ಗಂಟೆ ವೇಳೆಗೆ ರಾಘು ಬೋಂಟ್ರ ಅವರ ತಂಗಿ ಲಲಿತಾ (59) ಶಾಮಿಯಾನದ ಆಧಾರಕ್ಕೆಂದು ಅಳವಡಿಸಿದ್ದ ಕಂಬ ಸ್ಪರ್ಶಿಸಿದ್ದರು. ಆ ಕಂಬದಲ್ಲಿ ವಿದ್ಯುತ್‌ ಪ್ರವಹಿಸಿದ್ದ ಪರಿಣಾಮ ವಿದ್ಯುತ್‌ ಆಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಲಲಿತಾ ಅವರು ನಿಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಓರ್ವ ಪುತ್ರನನ್ನು ಅಗಲಿದ್ದಾರೆ.

ಅವಘಡದ ಹಿನ್ನೆಲೆಯಲ್ಲಿ ಬೋಂಟ್ರಮನೆಯಲ್ಲಿ ನಿಗದಿಯಾಗಿದ್ದ ಉತ್ತರ ಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !