ಬೆಳೆಸದೆ ಬೆಳೆಯುವ ಬೆಳೆಗೆ ಪ್ರಾಧಾನ್ಯತೆ – ಶ್ರೀ ಪಡ್ರೆ

ಮಂಗಳೂರು : ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ಜನವರಿಯಲ್ಲಿ ಹಮ್ಮಿಕೊಂಡಿರುವ ಗಡ್ಡೆ-ಗೆಣಸು ಮತ್ತು ಸೊಪ್ಪಿನ ಮೇಳ‌ದ ಬಗ್ಗೆ ಪೂರ್ವ ಸಿದ್ಧತೆ ಸಭೆ ಭಾನುವಾರ ಸಂಘನಿಕೇತನದಲ್ಲಿ ನಡೆಯಿತು.

ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಮಾರ್ಗದರ್ಶನ ನೀಡಿ, ಕಾರ್ಯಕ್ರಮಕ್ಕೆ ಸೀಮಿತವಾಗದೆ ಮಕ್ಕಳಲ್ಲಿ, ಪೇಟೆ ಜನಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಲಭ್ಯ ಜಾಗದಲ್ಲಿ ಗಡ್ಡೆ ಮತ್ತು ‌ಗೆಣಸು ಬೆಳೆ ಬೆಳೆಸಲು ಉತ್ಸಾಹ ತುಂಬಿ ಇದನ್ನು ಮುಂದುವರಿಸಲು ಮಾರ್ಗದರ್ಶನ ನೀಡಬೇಕು ಎಂದರು. ವಾಣಿಜ್ಯ ಸೊಪ್ಪಿನ ಬಗ್ಗೆ ‌ಮಾತ್ರ ಯೋಚನೆ ಮಾಡದೆ ಹಿತ್ತಿಲಿನಲ್ಲಿ‌ ಸಹಜವಾಗಿ ಬೆಳೆಯುವ ಸೊಪ್ಪು, ಗಡ್ಡೆ ಬಳಸುವ ಪ್ರೇರಣೆ ನೀಡುವ ಕೆಲಸವಾಗಲಿ ಎಂದರು.

ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಜಿ.ಆರ್. ಪ್ರಸಾದ್ ಮಾತನಾಡಿ, ವಿವಿಧ ರಾಜ್ಯಗಳ ರೈತರನ್ನು ‌ಭೇಟಿ ಮಾಡಲಾಗಿದೆ. ಕೇರಳ, ಜೊಯಿಡಾ, ಮೈಸೂರು, ಉಡುಪಿ ರೈತರನ್ನು ಭೇಟಿ‌ಮಾಡಲಾಗಿದೆ.‌ ಒರಿಸ್ಸಾ, ಆಂದ್ರದಿಂದಲೂ ರೈತರು ಭಾಗವಹಿಸುವ‌ರು ಎಂದರು. ಮೇಳದ ಕಾರ್ಯದರ್ಶಿ ರತ್ನಾಕರ ಕುಳಾಯಿ ಮಾತನಾಡಿ, ಜೂನ್ ತಿಂಗಳಿನಿಂದ ಸಿದ್ಧತೆ ಆರಂಭಗೊಂಡಿದೆ. ರೈತರು ಬರಲು ಉತ್ಸಾಹ ತೋರಿದ್ದಾರೆ‌. ಮೇಳದಲ್ಲಿ ಪ್ರದರ್ಶನ ಜತೆಗೆ ಮಾಹಿತಿ, ಜಾಗೃತಿ, ಸಾವಯವ ಪ್ರೇರಣೆ ಸಿಗಲಿದೆ. ಕಾರ್ಯಕ್ರಮ ಯಶಸ್ವಿಗೆ ವಿವಿಧ ‌ಸಮಿತಿ ರಚಿಸಲಾಗಿದೆ ಎಂದರು.

ಮೇಳದ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾರ್ಗ ದರ್ಶನ ನೀಡಿದರು. ಕೋಶಾಧಿಕಾರಿ ‌ಶರತ್ ಕುಮಾರ್ ಇದ್ದರು. ವಿವಿಧ ಸಮಿತಿ ಪ್ರಮುಖರು ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.

Related posts

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಕನ್ನಡ ಭಾಷೆಯ ಬಗೆಗಿನ ಒಲವು ಎಲ್ಲರಲ್ಲೂ ಮೂಡಬೇಕು – ಜನಾರ್ದನ್ ಕೊಡವೂರು ​

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್