ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ

ಉಡುಪಿ : ಪಂಚಾಯತ್ ಉಪಾಧ್ಯಕ್ಷ ಅಧಿಕಾರ ಸ್ವೀಕರಿಸುವ ವೇಳೆ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ‌ಯಿಂದ ಪ್ರಾರ್ಥನೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ – ಎಸ್‌ಡಿ‌ಪಿ‌ಐ ಅಧಿಕಾರ ಹಂಚಿಕೆ ವೇಳೆ ವಿವಾದಾತ್ಮಕ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ದುವಾ‌ವನ್ನು ಎಸ್‌ಡಿ‌ಪಿ‌ಐ ಮುಖಂಡರು ಮಾಡಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

ಕಾಂಗ್ರೆಸ್ – ಎಸ್‌ಡಿ‌ಪಿ‌ಐ ಮೈತ್ರಿ ಆಧಾರದಲ್ಲಿ ಅಧಿಕಾರ ಹಂಚಿಕೆಯಾಗಿದ್ದು, ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ಎಂಬುವವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಎಸ್‌ಡಿ‌ಪಿ‌ಐ ಬೆಂಬಲಿತ ಸದಸ್ಯ ತಬ್ರೇಜ್ ಎಂಬಾತನಿಗೆ ಉಪಾಧ್ಯಕ್ಷ ಸ್ಥಾನ, ಉಪಾಧ್ಯಕ್ಷನ ಅಧಿಕಾರ ಸ್ವೀಕಾರ ವೇಳೆ ಮೌಲ್ವಿ ಕರೆಸಿ ಪ್ರಾರ್ಥನೆ ನಡೆಸಲಾಗಿದೆ. ಉಪಾಧ್ಯಕ್ಷ ತಬ್ರೇಜ್ ಕಚೇರಿಯಲ್ಲೇ ಪ್ರಾರ್ಥನೆ ನಡೆದಿದ್ದು, ದುವಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮ ಪಂಚಾಯತ್ ಕಚೇರಿಯಲ್ಲಿ ಧಾರ್ಮಿಕ ಚಟುವಟಿಕೆ ನಡೆಸಿದ ಹಿನ್ನಲೆ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

Related posts

‘ಪಂಪ ಭಾರತ ರೀಟೋಲ್ಡ್ ಇಂಗ್ಲಿಷ್ ನೆರೇಟಿವ್’ ಪುಸ್ತಕ ಅನಾವರಣ – ಪಂಪ ಭಾರತ ಇಂಗ್ಲಿಷ್ ಭಾಷೆಗೆ ಅನುವಾದವಾಗಿರುವುದು ಜಾಗತಿಕ ವಿದ್ಯಾಮಾನ : ಡಾ. ಬಿ.ಎ. ವಿವೇಕ ರೈ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ರಿಂದ ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆ

ಡೊಂಗರಕೇರಿ ವೆಂಕಟರಮಣ ದೇವಳದಲ್ಲಿ ವೈಕುಂಠ ಏಕಾದಶಿ