ಅಕ್ರಮ ಪಟಾಕಿ ದಾಸ್ತಾನು ಕೇಂದ್ರಕ್ಕೆ ಪೊಲೀಸರ ದಾಳಿ – 40 ಕೆ.ಜಿ. ಪಟಾಕಿ ವಶ

ಉಡುಪಿ : ಅಕ್ರಮವಾಗಿ ಪಟಾಕಿ ದಾಸ್ತಾನು ಇರಿಸಲಾಗಿದ್ದ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿ ಪಟಾಕಿ ವಶಕ್ಕೆ ಪಡೆದಿದ್ದಾರೆ.


ಉಡುಪಿಯ ಮೂಡನಿಡಂಬೂರು ಗ್ರಾಮದ ಜಿಟಿಎಸ್ ಶಾಲೆಯ ಎದುರು ವಿದ್ಯಾಜ್ಯೋತಿ ಬಿಲ್ಡಿಂಗ್‌ನ ಕಾಬ್ರಾಲ್ ಗನ್‌ ಹೌಸ್‌ನಲ್ಲಿ ಪರವಾನಗಿ ಇಲ್ಲದೇ ಸುಡುಮದ್ದುಗಳನ್ನು ಇಟ್ಟುಕೊಂಡಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ.

ನಂತರ ದಾಳಿ ನಡೆಸಿದಾಗ ಸ್ಥಳದಲ್ಲಿ ಪಟಾಕಿಗಳನ್ನು ದಾಸ್ತಾನು ಇಟ್ಟಿರುವುದು ಕಂಡುಬಂದಿದೆ. ಸ್ಥಳದಲ್ಲಿ ಹಾಜರಿದ್ದ ರೋನಾಲ್ಡ್ ಜಿ ಕಾಬ್ರಾಲ್ ಎಂಬುವವರಲ್ಲಿ ವಿಚಾರಿಸಿದಾಗ ದೀಪಾವಳಿ ಹಬ್ಬದ ಪ್ರಯುಕ್ತ ಮಾರಾಟ ಮಾಡುವ ಉದ್ದೇಶದಿಂದ ಪಟಾಕಿಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿಯಿಂದ ಒಟ್ಟು 40 ಕೆ ಜಿ ತೂಕದ ಪಟಾಕಿ ಸುಡುಮದ್ದುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿ ರೊನಾಲ್ಡ್ ಜಿ ಕಾಬ್ರಾಲ್ ಎಂಬಾತನು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಸ್ವಾಧೀನ ಹೊಂದಿದ್ದು ಪ್ರಕರಣ ದಾಖಲಾಗಿದೆ

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ