ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕುಂದಾಪುರ : ಸದಾ ಜಗಳ ಕಿರುಚಾಟ ಹಾಗೂ ಹೊಡೆದಾಟಗಳಿಂದ ಗಿಜಿಗುಡುತ್ತಿದ್ದ ಕುಂದಾಪುರ ನಗರದ ಶಾಸ್ತ್ರೀಪಾರ್ಕ್‌ ಫ್ಲೈ ಓವರ್‌ನ ತಳಭಾಗ ಇಂದು ಶಾಂತ ಸ್ಥಿತಿಗೆ ಮರಳಿದೆ ಇಲ್ಲಿ ಸದಾ ಮಲಗಿ ವಿಶ್ರಾಂತಿ ಪಡೆಯುವ ವಲಸೆ ಕಾರ್ಮಿಕರ ತೆರವು ಕಾರ್ಯಾಚರಣೆ ಯಶಸ್ವಿಯಾಗಿದ್ದು ಪ್ರಮುಖ ರಸ್ತೆಯ ಬದಿಗಳಲ್ಲಿ ಮಲಗುವ ವಲಸೆ ಕಾರ್ಮಿಕರು ಬೇರೆ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಶಾಸ್ತ್ರೀಪಾರ್ಕ್‌ ಫ್ಲೈ ಓವರ್‌ನ ತಳಭಾಗದಲ್ಲಿ ಪೊಲೀಸರ ನಿಯೋಜನೆಯಾಗಿದ್ದು ಮಲಗಲು ಬಂದ ವಲಸೆ ಕಾರ್ಮಿಕರಿಗೆ ಬುದ್ದಿ ಹೇಳಿ ವಾಪಾಸ್ಸು ಕಳಿಸುತ್ತಿದ್ದಾರೆ.

ಕುಂದಾಪುರ ನಗರ ಪೊಲೀಸ್ ಇಲಾಖೆ ಕುಂದಾಪುರ ಪುರಸಭೆ ಹಾಗೂ ಕಾರ್ಮಿಕ ಇಲಾಖೆಯವರ ಜಂಟಿ ಕಾರ್ಯಾಚರಣೆಗೆ ಕುಂದಾಪುರದ ನಾಗರಿಕರು ಮೆಚ್ಚುಗೆ ಸೂಚಿಸಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ