ಪಿಸ್ತೂಲ್ ಮಿಸ್‌ಫೈರ್ – ಕಾಂಗ್ರೆಸ್ ನಾಯಕ ಚಿತ್ತರಂಜನ್ ಶೆಟ್ಟಿ‌ಗೆ ಗಾಯ; ಆಸ್ಪತ್ರೆಗೆ ದಾಖಲು

ಬಂಟ್ವಾಳ : ಇತ್ತೀಚೆಗಷ್ಟೇ ಪರವಾನಗಿ ಪಡೆದ ಪಿಸ್ತೂಲ್ ಆಕಸ್ಮಿಕವಾಗಿ ಸಿಡಿದ ಪರಿಣಾಮ ಕಾಂಗ್ರೆಸ್ ನಾಯಕ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಗಾಯಗಳಾದ ಘಟನೆ ನಡೆದಿದೆ.

ವಿಟ್ಲ ಸಮೀಪ ಅನಂತಾಡಿ ಎಂಬಲ್ಲಿಗೆ ತೆರಳಿದ್ದ ಸಂದರ್ಭ, ತನ್ನ ಕೈಯಲ್ಲಿದ್ದ ಪಿಸ್ತೂಲು ಮಿಸ್ ಫೈರ್ ಆಗಿ ತೊಡೆಯ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಹೊರವಲಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಗುಂಡೇಟು ತಗಲಿದ ವಿಚಾರ ಸಂಜೆಯ ವೇಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದು, ಈ ಕುರಿತು ರಾತ್ರಿವರೆಗೆ ಯಾವುದೇ ಪೊಲೀಸ್ ಪ್ರಕರಣ ಸಮೀಪದ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿಲ್ಲ.

Related posts

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್

ತಲವಾರು ಝಳಪಿಸಿದ ಪ್ರಕರಣ; ಇಬ್ಬರ ಸೆರೆ

ಪಾರ್ಕ್‌ ಮಾಡಿದ್ದ ದ್ವಿಚಕ್ರವಾಹನ ಕಳವು