ಕೊಳವೆಗೆ ಹಾನಿ : ಮಂಗಳೂರು ನಗರದ ಹಲವು ಭಾಗಗಳಿಗೆ ನೀರಿಲ್ಲ

ಮಂಗಳೂರು : ಬಂಟ್ವಾಳದ ತುಂಬೆಯಿಂದ ಬೆಂದೂರ್‌ವೆಲ್‌ಗೆ ಬರುವ ಕುಡಿಯುವ ನೀರಿನ ಕೊಳವೆಗೆ ಪಡೀಲ್ ಬಳಿ ಹಾನಿಯುಂಟಾದ ಪರಿಣಾಮ ಮಂಗಳೂರು ನಗರದ ಶೇಕಡ 60 ಭಾಗಗಳಿಗೆ ನೀರಿನ ಸರಬರಾಜಿನಲ್ಲಿ ಸಮಸ್ಯೆಯುಂಟಾಗಿದೆ.

ಗೇಲ್ ಕಂಪೆನಿಯು ಕಾಮಗಾರಿ ಮಂಗಳವಾರ ರಾತ್ರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೊಳವೆಗೆ ಹಾನಿಯುಂಟಾಗಿತ್ತು. ಮಂಗಳವಾರ ರಾತ್ರಿಯಿಂದಲೇ ನೀರಿನ ಸರಬರಾಜಿಗೆ ಸಮಸ್ಯೆ ಎದುರಾಗಿದೆ. ಇದರಿಂದ ನಗರಾದಾದ್ಯಂತ ಜನರು ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಮಂಗಳವಾರ ರಾತ್ರಿ ಕೊಳವೆಗೆ ಹಾನಿಯಾಗಿದ್ದು, ಇದನ್ನು ಸರಿಪಡಿಸಲು ಮಂಗಳೂರು ಮಹಾನಗರ ಪಾಲಿಕೆ ನಿರಂತರ ಶ್ರಮ ವಹಿಸಲಾಗಿದೆ. ಇಂದು ರಾತ್ರಿಯೊಳಗೆ ಕೆಲಸ ಪೂರ್ಣಗೊಳಿಸುವ ಸಾಧ್ಯತೆಯಿದೆ. ನಾಳೆಯಿಂದ ನೀರು ಸರಬರಾಜು ಆಗುವ ಸಾಧ್ಯತೆಯಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ