ಕೃಷ್ಣಮಠದಲ್ಲಿ ಪಿಕ್ ಪಾಕೆಟ್ ಮಾಡುವವರ ಹಾವಳಿ – ಒಂದೇ ತಿಂಗಳಲ್ಲಿ ಹಲವು ಪ್ರಕರಣ

ಉಡುಪಿ : ಪ್ರವಾಸಿಗರು ಹೆಚ್ಚಿದಂತೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಒಂದು ತಿಂಗಳಿಂದ ಲಕ್ಷಾಂತರ ಪ್ರವಾಸಿಗರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಕೃಷ್ಣ ದರ್ಶನ ಕೈಗೊಳ್ಳುತ್ತಿದ್ದಾರೆ.

ಸಾವಿರಾರು ಜನ ಓಡಾಡುವ ಕೃಷ್ಣ ಮಠದ ಒಳಾಂಗಣದಲ್ಲಿ, ಇತ್ತೀಚಿಗೆ ಕೆಲವು ಪಿಕ್ ಪಾಕೆಟ್ ಪ್ರಕರಣಗಳು ನಡೆದಿವೆ. ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿಕೊಂಡಿರುವ ದುಷ್ಕರ್ಮಿಗಳು, ಅವರ ಅರಿವಿಗೆ ಬಾರದಂತೆ ಪರ್ಸುಗಳನ್ನು ಎಗರಿಸುತ್ತಿದ್ದಾರೆ. ಇತ್ತೀಚಿಗೆ ಮಹಿಳೆಯೊಬ್ಬರ ಪರ್ಸ್ ಎಗರಿಸಿದ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದ್ದು, ಕೆಲ ಪ್ರವಾಸಿಗರ ಅರಿವಿಗೆ ಬಾರದಂತೆ ಕಳ್ಳತನವೂ ನಡೆಯುತ್ತಿದೆ. ಪ್ರವಾಸಿಗರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ