ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಇದು ತುಘಲಕ್ ಸರಕಾರ ಎನ್ನುವುದು ಸಾಬೀತಾಗಿದೆ – ಸುನಿಲ್ ಕುಮಾರ್

ಉಡುಪಿ : ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಇದು ತುಘಲಕ್ ಸರಕಾರ ಎನ್ನುವುದು ಸಾಬೀತಾಗಿದೆ ಅಂತ ಮಾಜಿ ಸಚಿವ ಸುನಿಲ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಚುನಾವಣೆ ಮುಗಿದು 10 ದಿನ ಕಳೆಯಲಿಲ್ಲ, ಈಗ ಬೆಲೆ ಏರಿಕೆ ಮಾಡಿದ್ದಾರೆ. ಚುನಾವಣೆಗೂ ಮುನ್ನ ಎಲ್ಲ ಯೋಜನೆಗಳನ್ನು ರದ್ದು ಮಾಡಿ ಗ್ಯಾರಂಟಿ ಜಪ ಮಾಡುತ್ತಿದ್ದ ಸರಕಾರ ಫಲಿತಾಂಶ ಬಂದ ಬಳಿಕ ಏಕಾಏಕಿ ತೆರಿಗೆ ಹೆಚ್ಚಳ ಮಾಡಿದೆ.

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಮೂರು ಮೂರೂವರೆ ರೂ.ಹೆಚ್ಚಳ ಮಾಡಿದೆ. ಹಾಲಿಗೆ ಸಬ್ಸಿಡಿ ಇಲ್ಲ, ಕಂದಾಯ ಇಲಾಖೆ ಕಾಗದ ಪತ್ರಗಳ ದರವೂ ಹೆಚ್ಚಳ ಮಾಡಲಾಗಿದೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಫೀಸ್ ಹೆಚ್ಚಳವಾಗಿದೆ. ಈಗ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿ ಖಜಾನೆ ತುಂಬಿಸುವ ಕಾರ್ಯ ಆರಂಭ ಮಾಡಿದ್ದಾರೆ. 13000 ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಕಡಿಮೆಯಾಗಿದ್ದು ಇದು ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಇದು ಸಾಕ್ಷಿ. ನಾಳೆಯಿಂದಲೇ ಬಿಜೆಪಿ ಹೋರಾಟ ಆರಂಭಸಲಿದೆ. ತಕ್ಷಣ ಸರಕಾರ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದವರು ಒತ್ತಾಯ ಮಾಡಿದ್ದಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು