ಮರಾಠಿ ಯಕ್ಷಗಾನ ‘ಚಕ್ರವ್ಯೂಹ’ಕ್ಕೆ ಜನಮೆಚ್ಚುಗೆ

ಉಡುಪಿ : ಉಡುಪಿಯ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಮರಾಠಿ ಯಕ್ಷಗಾನ ‘ಚಕ್ರವ್ಯೂಹ’ ಪ್ರದರ್ಶನಗೊಂಡಿತು. ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಐವೈಸಿಯಲ್ಲಿ ನಡೆದ ಈ ವಿಶಿಷ್ಟ ಯಕ್ಷಗಾನ, ಭಾಗವತಿಕೆ ಸಹಿತ ಸಂಪೂರ್ಣ ಯಕ್ಷಗಾನ ಪ್ರಸಂಗ ಮರಾಠಿ ಭಾಷೆಯಲ್ಲಿ ಪ್ರದರ್ಶನಗೊಂಡಿತು.

ವಿವಿಧ ಔದ್ಯೋಗಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ಸುಮಾರು 20 ಜನ ಹವ್ಯಾಸಿ ಕಲಾವಿದರು ಗುಣಮಟ್ಟದ ಪ್ರದರ್ಶನದ ಮೂಲಕ ಗಮನ ಸೆಳೆದರು. ಈ ಮೊದಲು ಮಹಾರಾಷ್ಟ್ರದಲ್ಲಿ ಈ ಪ್ರಸಂಗ ಮೂರು ಪ್ರದರ್ಶನಗಳನ್ನು ಕಂಡು, ಜನಮೆಚ್ಚಿಗೆ ಗಳಿಸಿತ್ತು. ಡಾ. ಶಿವರಾಮ ಕಾರಂತರ ಒಡನಾಡಿ, ಮರಾಠಿ ಲೇಖಕ ವಿಜಯಕುಮಾರ್ ಪಾತೆರ್ಪೆರ್ ಅವರು ಪ್ರಸಂಗವನ್ನು ರಚನೆ ಮಾಡಿದ್ದು, ಎರಡನೇ ಹಂತದಲ್ಲಿ ಮಹಾರಾಷ್ಟ್ರದಲ್ಲೇ ಎಂಟು ಪ್ರದರ್ಶನಗಳು ನಡೆಯಲಿವೆ ಎಂದು ಯಕ್ಷಗಾನ ಪ್ರಸಂಗದ ನಿರ್ದೇಶಕ ಬನ್ನಂಜೆ ಸಂಜೀವ ಸುವರ್ಣ ತಿಳಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ