ಬೈಕ್ ಏರಿದ ಪೇಜಾವರ ಶ್ರೀ

ರಾಯಚೂರು : ಗೋ ಪ್ರಿಯರಾದ ಶ್ರೀಗಳು ಹುಲ್ಲು ಕಿತ್ತರು, ಹಲಸಿನಹಣ್ಣು ಕೀಳಲು ಮರವೇರಿ ಸುದ್ದಿಯಾದರು. ಬೆಕ್ಕಿನ ರಕ್ಷಣೆಗೆ ಬಾವಿಗಿಳಿದರು, ಗುದ್ದಲಿ ಹಿಡಿದು ಮಣ್ಣು ಅಗೆದರು, ಬುಟ್ಟಿಯಲ್ಲಿ ಗೊಬ್ಬರ ಹೊತ್ತರು, ಹೀಗೆ ಸದಾ ವಿಶಿಷ್ಟ ವಿದ್ಯಮಾನಗಳಿಂದ ಸುದ್ದಿಯಲ್ಲಿರುವ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೈಕ್ ಏರಿ ಸುದ್ದಿ ಮಾಡಿದ್ದಾರೆ.

ರಾಯಚೂರಿನಲ್ಲಿ ಪ್ರವಾಸದಲ್ಲಿರುವ ಶ್ರೀಗಳು ವಿಪರೀತ ಮಳೆಯಿಂದ ರಸ್ತೆಗಳು ಹದಗೆಟ್ಟಿದ್ದು, ಕಾರಿನ ಬದಲಾಗಿ ದ್ವಿಚಕ್ರ ವಾಹನವನ್ನೇರಿ ಭಕ್ತರೋರ್ವರ ಮನೆಗೆ ಪಾದಪೂಜೆಗೆ ತೆರಳಿದರು. ಹೀಗೆ ವೈವಿಧ್ಯಮಯ ಕಾರ್ಯಗಳಿಂದ ಶ್ರೀ ವಿಶ್ವಪ್ರಸನ್ನತೀರ್ಥರು ವೈರಲ್ ಆಗುತ್ತಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ