ಪಾರ್ಕ್‌ ಮಾಡಿದ್ದ ದ್ವಿಚಕ್ರವಾಹನ ಕಳವು

ಮಂಗಳೂರು : ಬಂದರಿನ ದಕ್ಷಿಣ ಮೀನುಗಾರಿಕೆ ದಕ್ಕೆಯ ನೀರಿನ ಟ್ಯಾಂಕ್‌ ಬಳಿ ಪಾರ್ಕ್‌ ಮಾಡಿದ್ದ ಸ್ಕೂಟರ್‌ ಕಳವಾಗಿದೆ.

ಮೀನು ಅನ್‌ಲೋಡಿಂಗ್‌ ಕೆಲಸ ಮಾಡುವ ಮಂಜುನಾಥ ಗಾಲಪ್ಪನವರ್‌ ಎಂಬವರು ತಮ್ಮ ಸುಜುಕಿ ಆ್ಯಕ್ಸೆಸ್‌ ಸ್ಕೂಟರ್‌ ಪಾರ್ಕ್‌ ಮಾಡಿ ಕೆಲಸಕ್ಕೆ ಹೋಗಿದ್ದು, ವಾಪಸ್‌ ಬಂದು ನೋಡುವಾಗ ಸ್ಕೂಟರ್‌ ಪಾರ್ಕ್‌ ಮಾಡಿದ ಸ್ಥಳದಲ್ಲಿ ಇರಲಿಲ್ಲ.

ಕಳವಾದ ಸ್ಕೂಟರ್‌ ಮೌಲ್ಯ 25 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್

ತಲವಾರು ಝಳಪಿಸಿದ ಪ್ರಕರಣ; ಇಬ್ಬರ ಸೆರೆ

ಸುಹಾಸ್‌ ಶೆಟ್ಟಿ ಪ್ರಕರಣ ಎನ್‌ಐಎಗೆ ವಹಿಸಿ : ಹಿಂದೂ ಮಹಾಸಭಾ