ಪರಶುರಾಮ ಮೂರ್ತಿ ವಿವಾದ : ಶಿಲ್ಪಿ ಕೃಷ್ಣ ನಾಯ್ಕ್‌ 7 ದಿನ ಪೊಲೀಸ್‌ ಕಸ್ಟಡಿಗೆ

ಕಾರ್ಕಳ : ಬೈಲೂರಿನ ಥೀಮ್‌ ಪಾರ್ಕ್‌ನಲ್ಲಿ ಪರಶುರಾಮ ಮೂರ್ತಿ ನಿರ್ಮಾಣ ಮಾಡಿರುವ ಶಿಲ್ಪಿ, ಕೃಷ್‌ ಆರ್ಟ್‌ ವರ್ಲ್ಡ್‌ನ ಕೃಷ್ಣ ನಾಯ್ಕ್‌ನನ್ನು ಕಾರ್ಕಳ ನಗರ ಪೊಲೀಸರು ನ. 10ರಂದು ಬಂಧಿಸಿದ್ದು, ನ. 11ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಕೃಷ್ಣ ನಾಯ್ಕ್‌ನನ್ನು 7 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಕೃಷ್ಣ ನಾಯ್ಕ್‌ ವಿರುದ್ಧ ಕೃಷ್ಣ ಶೆಟ್ಟಿ ಬಜಗೋಳಿ ದಾಖಲಿಸಿರುವ ದೂರಿಗೆ ಸಂಬಂಧಪಟ್ಟಂತೆ ನ.4ರಂದು ಕಾರ್ಕಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶಿಲ್ಪಿ ಕೃಷ್ಣ ನಾಯ್ಕ್‌ ಅವರ ನಿರೀಕ್ಷಣಾ ಜಾಮೀನು ಆದೇಶವನ್ನು ನ.7ಕ್ಕೆ ಕಾಯ್ದಿರಿಸಿದ್ದರು. ನ.7ರಂದು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾಗಿದೆ. ಜಾಮೀನು ಅರ್ಜಿ ತಿರಸ್ಕೃತವಾದ ಬೆನ್ನಲ್ಲೇ ನ.10ರಂದು ಪೊಲೀಸರು ಕೃಷ್ಣ ನಾಯ್ಕ್‌ನನ್ನು ಕ್ಯಾಲಿಕಟ್‌ನಲ್ಲಿ ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ