ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀವನಾದರ್ಶ ಎಲ್ಲರಿಗೂ ಪ್ರೇರಣಾದಾಯಕ : ಕಿಶೋರ್ ಕುಮಾರ್ ಕುಂದಾಪುರ

ಉಡುಪಿ : ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಭಾರತೀಯ ಜನತಾ ಪಾರ್ಟಿಗೆ ಬಹುದೊಡ್ಡ ಆದರ್ಶ ವ್ಯಕ್ತಿಯಾಗಿದ್ದಾರೆ. ಸಂಘಟನೆಗೆ ಭದ್ರ ಬುನಾದಿಯನ್ನು ಹಾಕಿಕೊಡುವಲ್ಲಿ ಅವರ ಸೇವೆ ಅನನ್ಯ. ಪಂಡಿತ್ ಜೀ ಅವರ ಬಲಿದಾನ ದಿನದಂದು ಅವರ ಉದಾತ್ತ ತತ್ವ ಸಿದ್ಧಾಂತಗಳನ್ನು ನೆನಪಿಸಿಕೊಂಡು ಅವರನ್ನು ಸ್ಮರಿಸುವುದು ಪಕ್ಷದ ಕಾರ್ಯಕರ್ತರ ಆದ್ಯ ಕರ್ತವ್ಯ. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನಾದರ್ಶ, ಜೀವನ ಸ್ಫೂರ್ತಿ ಎಲ್ಲರಿಗೂ ಪ್ರೇರಣಾದಾಯಕವಾಗಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸಮರ್ಪಣಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ನಿಧಿ ಸಮರ್ಪಿಸಿ ಮಾತನಾಡಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಜನ ಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸಾರ್ಥಕ ಬದುಕಿನ ವಿವಿಧ ಅವಿಸ್ಮರಣೀಯ ಘಟನೆಗಳನ್ನು ವಿಶ್ಲೇಷಿಸಿ ಅವರ ತತ್ವಾದರ್ಶಗಳು ಮತ್ತು ತ್ಯಾಗ, ಬಲಿದಾನದ ವಿಸ್ತ್ರತ ಮಾಹಿತಿಯನ್ನು ನೀಡಿ ಉಪನ್ಯಾಸವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪಕ್ಷದ ಪ್ರಮುಖರಾದ ರವಿ ಅಮೀನ್, ಮೋಹನ ಉಪಾಧ್ಯಾಯ, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ರಾಘವೇಂದ್ರ ಕುಂದರ್, ವಿಜಯಕುಮಾರ್ ಉದ್ಯಾವರ, ದಿನೇಶ್ ಅಮೀನ್, ಜಗದೀಶ್ ಆಚಾರ್ಯ, ರುಡಾಲ್ಫ್ ಡಿಸೋಜ, ಟಿ.ಜಿ. ಹೆಗ್ಡೆ, ಶ್ಯಾಮಲಾ ಎಸ್. ಕುಂದರ್, ಪ್ರಿಯದರ್ಶಿನಿ ದೇವಾಡಿಗ, ಸುಮಿತ್ರಾ ಆರ್. ನಾಯಕ್, ವೀಣಾ ಎಸ್. ಶೆಟ್ಟಿ, ನಳಿನಿ ಪ್ರದೀಪ್ ರಾವ್, ಕಲ್ಪನಾ ಸುಧಾಮ, ದೇವೇಂದ್ರ ಪ್ರಭು, ಡಾ! ವಿಜಯೇಂದ್ರ ವಸಂತ್, ಡಾ! ವಿದ್ಯಾಧರ ಶೆಟ್ಟಿ, ಮಧುಕರ ಮುದ್ರಾಡಿ, ಅಶೋಕ್ ನಾಯ್ಕ್, ಮಂಜುನಾಥ್ ಮಣಿಪಾಲ, ರಶ್ಮಿತಾ ಬಿ. ಶೆಟ್ಟಿ, ಶೋಭಾ ಶೆಟ್ಟಿ, ಸುಮಾ ಶೆಟ್ಟಿ, ಪ್ರೀತಿ, ವೆಂಕಟರಮಣ ಕಿದಿಯೂರು, ರಾಜೇಂದ್ರ ಪಂದುಬೆಟ್ಟು, ಆನಂದ್ ಸುವರ್ಣ, ಕಿಶೋರ್ ಕರಂಬಳ್ಳಿ, ಶ್ರೀವತ್ಸ, ಚಂದ್ರಶೇಖರ ಪ್ರಭು, ಶಿವರಾಮ್ ಕಾಡಿಮಾರ್ ಮುಂತಾದವರು ಉಪಸ್ಥಿತರಿದ್ದರು.

Related posts

ಉಡುಪಿಯಿಂದ ಮಹಾಕುಂಭ ಮೇಳಕ್ಕೆ ರೈಲು – ಸಂಸದ ಕೋಟ ಮನವಿ

ಶಿಕ್ಷಣತಜ್ಞ ಸೀತಾರಾಮ ಶೆಟ್ಟಿ ನಿಧನ

ಮುಸುಕುಧಾರಿಗಳಿಂದ ಎಟಿಎಂ ದರೋಡೆಗೆ ವಿಫಲ ಯತ್ನ : ಆರೋಪಿಗಳ ಪತ್ತೆಗೆ 3 ವಿಶೇಷ ತಂಡ ರಚನೆ