ಕಿಂಡಿ ಅಣೆಕಟ್ಟು ಮೇಲೆ ಭಾರೀ ತ್ಯಾಜ್ಯ – ಮರದ ದಿಮ್ಮಿಗಳನ್ನು ತೆರವು ಮಾಡಿದ ಪಂಚಾಯತ್ ಸಿಬ್ಬಂದಿ; ಮಟಪಾಡಿಯತ್ತ ಹರಿದು ಬಂದ ನದಿ ನೀರು

ಬ್ರಹ್ಮಾವರ : ಉಡುಪಿಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ನದಿ, ನದಿ ಪಾತ್ರಗಳಲ್ಲಿ ನೆರೆ ಸೃಷ್ಟಿಯಾಗಿತ್ತು. ನದಿ ಪಾತ್ರದ ಗದ್ದೆ ತೋಟಗಳು ಜಲಾವೃತವಾಗಿತ್ತು. ಮೈದುಂಬಿ ಹರಿದ ನದಿಗಳು ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿವೆ. ನೆರೆ ಇಳಿಯುತ್ತಿದ್ದಂತೆ ಆಗಿರುವ ಒಂದೊಂದೇ ಅವಾಂತರಗಳು ತೆರೆದುಕೊಳ್ಳುತ್ತಿವೆ. ಬ್ರಹ್ಮಾವರ ತಾಲೂಕಿನಲ್ಲಿ ಹರಿಯುವ ಸೀತಾ ನದಿ ನೀಲಾವರ ಗ್ರಾಮದ ಕಿಂಡಿ ಅಣೆಕಟ್ಟನ್ನು ಸಂಪೂರ್ಣ ಜಲಾವೃತ ಮಾಡಿತ್ತು. ನೆರೆ ನೀರು ಇಳಿಮುಖವಾಗುತ್ತಿದ್ದಂತೆ ಕಿಂಡಿ ಅಣೆಕಟ್ಟುವಿನ ಮೇಲೆ ದೊಡ್ಡ ದೊಡ್ಡ ಮರದ ದಿಮ್ಮಿ, ಮರದ ರೆಂಬೆ ಕೊಂಬೆಗಳು ಕಸ ಪ್ಲಾಸ್ಟಿಕ್ ಇತ್ಯಾದಿಗಳು ಆವರಿಸಿಕೊಂಡು ಬಿಟ್ಟಿವೆ. ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ಅಣೆಕಟ್ಟುವಿನ ಮೇಲೆ ಶೇಖರಣೆಯಾಗಿದೆ.

ನೀಲಾವರ ಗ್ರಾಮ ಪಂಚಾಯತ್ ಕಿಂಡಿ ಅಣೆಕಟ್ಟನ್ನು ಸ್ವಚ್ಛ ಮಾಡುವ ಕೆಲಸ ಮಾಡಿಸುತ್ತಿದೆ. ಸಣ್ಣನೀರಾವರಿ ಇಲಾಖೆಯು ಅಣೆಕಟ್ಟಿನ ಮೇಲಿನ ತ್ಯಾಜ್ಯವನ್ನು ಸ್ವಚ್ಛ ಮಾಡುತ್ತಿದ್ದಂತೆ ನೀರು, ನೀಲಾವರದಿಂದ ಮಟಪಾಡಿ ಗ್ರಾಮದತ್ತ ಸರಾಗವಾಗಿ ಹರಿಯುತ್ತಿದೆ. ಇದು ಒಂದು ಕಡೆಯ ಸಮಸ್ಯೆ ಅಲ್ಲ, ಜಿಲ್ಲೆಯ ಹತ್ತಾರು ಕಡೆ ಪಂಚಾಯತ್‌ಗಳು ಈ ಸಮಸ್ಯೆ‌ಯನ್ನು ಎದುರಿಸುತ್ತಿವೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ