ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮ ಭವ್ಯ ಶಿಲಾಮಯ ಮಂದಿರಕ್ಕೆ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಪಾದುಕಾನ್ಯಾಸ

ಈ ಸಂದರ್ಭದಲ್ಲಿ ಶಿರಸಿ ಲೋಕಸಭಾ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಳ್ಳಾರಿ ಲೋಕಸಭಾ ಸಂಸದರಾದ ಈ. ತುಕಾರಾಮ್ ರವರು, ಸೋದೆಯ ಅರಸಪ್ಪ ನಾಯಕ ವಂಶಸ್ಥರಾದ ಮಧುಲಿಂಗ ನಾಗೇಶ ರಾಜೇಂದ್ರ ಒಡೆಯರ್ ಹಾಗೂ ದಿವಾನರಾದ ಶ್ರೀನಿವಾಸ ತಂತ್ರಿಗಳು ಉಪಸ್ಥಿತರಿದ್ದರು.

ಅವಧಾನಿ ಸುಬ್ರಹ್ಮಣ್ಯ ಭಟ್ಟರು ಗುರುರಾಜರ ಭವ್ಯ ಮಂದಿರದ ವಿನ್ಯಾಸದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಪ್ಪಾಣಿ ಗುರುರಾಜ ಆಚಾರ್ಯರು ಅಭ್ಯಾಗತರನ್ನು ಸ್ವಾಗತಿಸಿದರೆ, ಬೆ. ನಾ. ವಿಜಯೀಂದ್ರ ಆಚಾರ್ಯರು ಸಭಾ ಕಾರ್ಯಕ್ರಮ ನಿರ್ವಹಿಸಿದರು. ಮಧ್ವೇಶತಂತ್ರಿ ಧನ್ಯವಾದ ಸಮರ್ಪಿಸಿದರು. ವಿದ್ವಾನ್ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಾನ ನೆರವೇರಿಸಿದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ