ವಿಪ್ರ ಬಾಂಧವರಿಂದ ಉಡುಪಿ ಶ್ರೀ ಕೃಷ್ಣನ ಸನ್ನಿದಾನಕ್ಕೆ ಪಾದಯಾತ್ರೆ

ಹೆಬ್ರಿ : ವಿಪ್ರ ಬಾಂಧವರಿಂದ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಉಡುಪಿ ಶ್ರೀ ಕೃಷ್ಣಮಠಕ್ಕೆ 14ನೇ ಪಾದಯಾತ್ರೆ ಸೆಪ್ಟೆಂಬರ್ 22ರಂದು ಭಾನುವಾರ ನಡೆಯಿತು.

ಧರ್ಮ ಜಾಗೃತಿ, ದೇವರ ಅನುಗ್ರಹ, ಧರ್ಮ ಜಾಗೃತಿ ಮತ್ತು ಲೋಕಕ್ಕೆ ಸುಭಿಕ್ಷೆಯಾಗಲಿ ಎನ್ನುವ ಸದುದ್ದೇಶದಿಂದ
ಪಾದಯಾತ್ರೆಯ ಹಾದಿಯಲ್ಲಿ ದೇವರ ನಾಮಾವಳಿ, ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡುತ್ತ ಭಕ್ತರು ತೆರಳಿದರು. ಪಾಡಿಗಾರ ವಡ್ಡ‌ಮೇಶ್ವರ ಮಠದ ಬೆಣ್ಣೆ ಕೃಷ್ಣ ದೇವರ ಮತ್ತು ಪೆರ್ಡೂರು ಅನಂತ ಪದ್ಮನಾಭ ದೇವರ ದರ್ಶನ ಮಾಡಿ ಹಿರಿಯಡ್ಕ ಪುತ್ತಿಗೆ ಮಠಕ್ಕೆ ತೆರಳಿ ಸುವರ್ಣಾ ನದಿಯಲ್ಲಿ ತೀರ್ಥಸ್ನಾನ ಮಾಡಿ ಶ್ರೀ ವಿಠಲ ದೇವರ ದರ್ಶನ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಅಲ್ಲಿಂದ ಉಡುಪಿಗೆ ತೆರಳಿ ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣ ದೇವರ ದರ್ಶನ ಮಾಡಿ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ದರ್ಶನ ಮಾಡಿ ಮಧ್ವ ಸರೋವರಕ್ಕೆ ತೆರಳಿ ತೀರ್ಥ ಸ್ನಾನ ಮಾಡಿ ಪಾದಯಾತ್ರೆ ಸಮಾಪ್ತಿಗೊಳಿಸಿದರು. ಅನಂತರ ಶ್ರೀ ಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.

ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್ ಮತ್ತು ಸುದರ್ಶನ್ ಜೋಯಿಸ್ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ವೇದವ್ಯಾಸ ತಂತ್ರಿ ಮಡಾಮಕ್ಕಿ, ಸುಬ್ರಮಣ್ಯ ಆಚಾರ್ಯ ಹೆಬ್ರಿ, ನಿತ್ಯಾನಂದ ಭಟ್ ಹೆಬ್ರಿ, ವೆಂಕಟರಮಣ ಕಲ್ಕೂರ್ ಉಪ್ಪಳ, ಗಿರೀಶ್ ಶಿವಪುರ, ರಾಘವೇಂದ್ರ ಭಟ್ ಉಪ್ಪಳ, ರಾಮಚಂದ್ರ ಭಟ್ ವರಂಗ, ವಿದ್ಯಾಲಕ್ಷ್ಮಿ ಆಚಾರ್ಯ ಗಿಲ್ಲಾಳಿ, ಶ್ರೀಕಾಂತ್ ಭಟ್ ಮುದ್ರಾಡಿ, ಶಂಕರ್ ಭಟ್ ಹೆರ್ಮುಂಡೆ, ಶ್ರೀಕಾಂತ್ ಓಕುಡ ಕನ್ಯಾನ, ಗಣೇಶ್ ಉಳಿತಾಯ ಉಪ್ಪಳ, ಕೃಷ್ಣ ಉಳಿತಾಯ ಉಪ್ಪಳ, ವೀಣಾ ಭಟ್ ವರಂಗ, ರಮ್ಯಾ ಭಟ್ ಬಲ್ಲಾಡಿ, ಪ್ರಶಾಂತ್ ಭಟ್ ದೊಡ್ಡಬಳ್ಳಾಪುರ, ಶ್ವೇತಾ ಭಟ್ ದೊಡ್ಡಬಳ್ಳಾಪುರ, ಪ್ರಕಾಶ್ ಭಟ್ ಹೆಬ್ರಿ, ಶ್ರೀನಿವಾಸ ಭಟ್ ಎಣ್ಣೆಹೊಳೆ, ಶಿಶಿರ ಜೋಯಿಸ್ ಹೆಬ್ರಿ, ಜಾನಕಿ ಭಟ್ ಗಿಲ್ಲಾಳಿ, ರಾಘವೇಂದ್ರ ಕಲ್ಕೂರ್ ಉಪ್ಪಳ , ವಸುಪ್ರದಾ ಆಚಾರ್ಯ, ಬೆಂಗಳೂರು, ಶ್ರೀಶ ಭಟ್ ಬಲ್ಲಾಡಿ ಪಾಲ್ಗೊಂಡರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು