ಸಂಘಟಕ, ಹೊನ್ನಾಳ ಜಾಮಿಯ ಮಸೀದಿ ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಾಹೇಬ್ ನಿಧನ

ಉಡುಪಿ : ಹೊನ್ನಾಳ ಖದೀಮ್ ಜಾಮಿಯ ಮಸೀದಿಯ ಕಾರ್ಯದರ್ಶಿ ಬಿ. ಅಬ್ದುಲ್ ಖಾದಿರ್ ಸಾಹೇಬ್ ಹೊನ್ನಾಳ(85) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಹೊನ್ನಾಳ ಹಝ್ರತೇ ಹಜಾನಿಮಾ ರಹಮತುಲ್ಲಾಹಿ ಅಲೈಹಾ ದರ್ಗಾ ಶರೀಫ್‌ನ ಮಾಜಿ ಅಧ್ಯಕ್ಷ, ವಿವಿಧ ಸುನ್ನಿ ಸಂಘಟನೆಗಳ ನಾಯಕರಾಗಿದ್ದ ಇವರು, ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪರಿಸರದಲ್ಲಿ ಹಿಂದು ಮುಸ್ಲಿಂ ಭಾವೈಕ್ಯದ ಕೊಂಡಿಯಾಗಿದ್ದ ಇವರು, ಮಸೀದಿ ಮದ್ರಸಾ ದರ್ಗಾ ಹಾಗೂ ಇನ್ನಿತರ ಎಲ್ಲಾ ಸಾಮಾಜಿಕ ಎಲ್ಲಾ ಕೆಲಸಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.

ಮೃತರು ಪತ್ನಿ, ಮೂರು ಗಂಡು ಮಕ್ಕಳು ಮತ್ತು ಎರಡು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಜಾಮಿಯ ಮಸೀದಿಯ ಅಧ್ಯಕ್ಷ ಮುಹಮ್ಮದ್ ರಫೀಕ್ ಎಂ. ಸಂತಾಪ ವ್ಯಕ್ತಪಡಿಸಿದ್ದಾರೆ

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ