ವಿಶ್ವ ಭ್ರೂಣಶಾಸ್ತ್ರಜ್ಞರ ದಿನದ ಅಂಗವಾಗಿ ಕೆಎಂಸಿ ಮಣಿಪಾಲದ ಸಂತಾನೋತ್ಪತ್ತಿ ವಿಜ್ಞಾನ ವಿಭಾಗದ ಕ್ಲಿನಿಕಲ್ ಭ್ರೂಣಶಾಸ್ತ್ರ ಕೇಂದ್ರದಿಂದ ‘ಓಪನ್‌ ಡೇ’ ಕಾರ್ಯಕ್ರಮ

ಮಣಿಪಾಲ : ಮಣಿಪಾಲದ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿ[ಕೆಎಂಸಿ]ನ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಇನ್‌ ಕ್ಲಿನಿಕಲ್‌ ಬಯೋಲಜಿ ಮತ್ತು ಸಂತಾನೋತ್ಪತ್ತಿ ವಿಜ್ಞಾನ ವಿಭಾಗಗಳ ವತಿಯಿಂದ ವಿಶ್ವ ಭ್ರೂಣಶಾಸ್ತ್ರಜ್ಞರ ದಿನದ ಆಚರಣೆಯ ಅಂಗವಾಗಿ ‘ಓಪನ್ ಡೇ ಕಾರ್ಯಕ್ರಮ ಜುಲೈ 25, 2024 ರಂದು ಆಯೋಜಿಸಲಾಗಿತ್ತು. ‘ವಿಶ್ವ ಭ್ರೂಣಶಾಸ್ತ್ರಜ್ಞರ ದಿನ’ವನ್ನು ಜಗತ್ತಿನ ಪ್ರಥಮ ಪ್ರನಾಳ ಶಿಶುವಾದ ಲೂಯಿಸ್‌ ಜಾಯ್‌ ಬ್ರೌನ್‌ನ ಜನ್ಮ ದಿನದಂದು ಆಚರಿಸಲಾಗುತ್ತಿದ್ದು, ಮಣಿಪಾಲದ ಸುತ್ತಮುತ್ತಲಿನ ಕಾಲೇಜುಗಳ ಜೀವವಿಜ್ಞಾನದ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವನ್ನು ಮೂಡಿಸಿ, ಪ್ರನಾಳ ಶಿಶು ಫಲೀಕರಣ ಕ್ಷೇತ್ರದಲ್ಲಿರುವ ವ್ಯಾಪಕ ಸಂಶೋಧನ ಅವಕಾಶಗಳ ಬಗ್ಗೆ ಒಳನೋಟಗಳನ್ನು ಒದಗಿಸುವ ಗುರಿಯನ್ನು ಹೊಂದಿತ್ತು.

ಓಪನ್ ಡೇ ಕಾರ್ಯಕ್ರಮವನ್ನು ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ.ಶರತ್ ರಾವ್ ಉದ್ಘಾಟಿಸಿದರು. ಅವರು ಮಾತನಾಡುತ್ತಾ, “ಸಂತಾನೋತ್ಪತ್ತಿ ಔಷಧದ ಭವಿಷ್ಯವು ಕ್ಲಿನಿಕಲ್ ಭ್ರೂಣಶಾಸ್ತ್ರಜ್ಞರ ಪರಿಣತಿ ಮತ್ತು ಸಮರ್ಪಣೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ವೃತ್ತಿಪರರು ದಂಪತಿಗಳಿಗೆ ಬಂಜೆತನದ ಸವಾಲುಗಳನ್ನು ಜಯಿಸಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಲಿದ್ದಾರೆ. ಅವರ ಮಹತ್ವಾಕಾಂಕ್ಷೆಯನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಸಂಪನ್ಮೂಲಗಳು ಮತ್ತು ಜ್ಞಾನವನ್ನು ಹೊಂದಿರುವ ವಿದ್ಯಾರ್ಥಿಗಳು ಸಮಗ್ರ ಶಿಕ್ಷಣ, ತರಬೇತಿ ಮತ್ತು ಅತ್ಯಾಧುನಿಕ ಸಂಶೋಧನೆಗೆ ಒಡ್ಡಿಕೊಳ್ಳುವುದರ ಮೂಲಕ, ಮುಂದಿನ ಪೀಳಿಗೆಯ ಕ್ಲಿನಿಕಲ್ ಭ್ರೂಣಶಾಸ್ತ್ರಜ್ಞರು ಗಮನಾರ್ಹ ಕೊಡುಗೆಗಳನ್ನು ನೀಡಲು ಸಿದ್ಧರಾಗಿದ್ದಾರೆ ಎಂದು ನಾವು ಖಚಿತಪಡಿಸಿಕೊಳ್ಳಬಹುದು. ಈ ಗುರಿಯನ್ನು ಸಾಧಿಸಲು ಇಂದಿನ ಈ ಕಾರ್ಯಕ್ರಮವು ಒಂದು ಮಹತ್ವದ ಹೆಜ್ಜೆಯಾಗಿದೆ, ಏಕೆಂದರೆ ಇದು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವೃತ್ತಿಯ ಪ್ರಭಾವವನ್ನು ಮತ್ತು ಜನರ ಜೀವನದಲ್ಲಿ ಅವರು ಮಾಡಬಹುದಾದ ವ್ಯತ್ಯಾಸವನ್ನು ನೇರವಾಗಿ ನೋಡಲು ಅನುವು ಮಾಡಿಕೊಡುತ್ತದೆ” ಎಂದರು.

ಕೆಎಂಸಿಯ ಡೀನ್‌ ಡಾ. ಪದ್ಮರಾಜ್‌ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ, ‘ಸಂತಾನೋತ್ಪತ್ತಿ ವಿಜ್ಞಾನದಲ್ಲಿ ಸುಧಾರಿತ ತರಬೇತಿ ಮತ್ತು ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದರು. ಶಿಕ್ಷಣ ಮತ್ತು ಆವಿಷ್ಕಾರದಲ್ಲಿ ಉತ್ಕೃಷ್ಟತೆಗೆ ಕೇಂದ್ರದ ಬದ್ಧತೆಯನ್ನು ಅವರು ಎತ್ತಿ ತೋರಿಸಿದರು.’ ಎಂದರು.

ಪೂರ್ಣ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರನಾಳ ಶಿಶು ಸೃಷ್ಟಿಯ[ಐವಿಎಫ್‌] ವೆಜ್ಞಾನಿಕ ಪ್ರಕ್ರಿಯೆಯನ್ನು ಸನಿಹದಿಂದ ಅವಲೋಕಿಸುವ ಮತ್ತು ಭ್ರೂಣಶಾಸ್ತ್ರದ ತಜ್ಞರೊಂದಿಗೆ ಸಂವಾದಿಸುವ ಅವಕಾಶವನ್ನು ನೀಡಲಾಯಿತು. ಜೊತೆಗೆ, ಕಲಾಪಗಳನ್ನು ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸುವ, ಕೆಎಂಸಿಯಲ್ಲಿರುವ ಅತ್ಯಾಧುನಿಕ ಪ್ರಯೋಗಾಲಯಗಳನ್ನು ನೋಡುವ ಸಂದರ್ಭವನ್ನೂ ಕಲ್ಪಿಸಲಾಯಿತು.
ಐವಿಎಫ್‌ನ ಜಟಿಲತೆಗಳು ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಕ್ಲಿನಿಕಲ್ ಭ್ರೂಣಶಾಸ್ತ್ರದ ಮಹತ್ವದ ಪ್ರಭಾವದ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಮೆರುಗು ತಂದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು