ಆನ್‌ಲೈನ್ ಟ್ರೇಡಿಂಗ್ ಮೋಸ : 4 ಜನ ಆರೋಪಿಗಳ ಬಂಧನ, 13 ಲಕ್ಷ ನಗದು ವಶ!

ಉಡುಪಿ : ಉಪೇಂದ್ರಭಟ್ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ Whats‌App ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್‌ಮೆಂಟ್ ಗ್ರೂಪ್‌ಗೆ ಸೇರಿಸಿ, ಬಳಿಕ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಉಪೇಂದ್ರ ಭಟ್‌ರನ್ನು ನಂಬಿಸಿ, ಒಟ್ಟು 33,10,000 ರೂ.ಹಣವನ್ನು ಖಾತೆಗೆ ಹಾಕಿಸಿಕೊಂಡಿದ್ದರು.

ಈ ಬಗ್ಗೆ ಉಪೇಂದ್ರಭಟ್ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ವಿಶೇಷ ತಂಡ ರಚಿಸಲಾಗಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಹಮ್ಮದ್ ಮುಸ್ತಫಾ ಪಿ (36) ಖಾಲಿಸ್ ಬಿ, (39) ಮೊಹಮ್ಮದ್ ಸಫಾನ್ ಕೆ.ಎ, (22) ಸತೀಶ್ ಶೇಟ್, (22 ) ಬಂಧಿತರು.

ಬಂಧಿತರಿಂದ 5 ಮೊಬೈಲ್ ಪೋನ್ ಹಾಗೂ 13 ಲಕ್ಷ ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಸೂತ್ರದಾರಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ