ಆನ್‌ಲೈನ್ ವಂಚನೆ ಪ್ರಕರಣ – ಸೈಬರ್ ಆರೋಪಿಯ ಬಂಧನ, 1,56,100 ರೂ. ವಶ

ಉಡುಪಿ : ಪ್ರಶಾಂತ್‌ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಯಿಂದ, ಅವರ ಗಮನಕ್ಕೆ ಬಾರದೇ ಹಣ ವರ್ಗಾಯಿಸಿ ವಂಚಿಸಿದ್ದ ಸೈಬರ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಒರಿಸ್ಸಾ ರಾಜ್ಯದ ಬೈರಂಪುರದ ವಿಶಾಲ್‌‌ ಕೋನಪಾಲ(30) ಬಂಧಿತ ಆರೋಪಿ.

ಪ್ರಶಾಂತ್ ಶೆಟ್ಟಿ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಯೂನಿಯನ್ ಬ್ಯಾಂಕ್ ಬೆಳ್ಮಣ್‌‌ ಶಾಖೆಯಲ್ಲಿ ಎರಡು ಖಾತೆಯನ್ನು ಹೊಂದಿರುತ್ತಾರೆ. ಎರಡು ಖಾತೆಗಳಲ್ಲಿ Paytm ಆನ್‌ಲೈನ್ ಪೆಮೆಂಟ್ ಸಿಸ್ಟ್ಂ ಅನ್ನು ಹೊಂದಿದ್ದು ಯಾರೋ ಅಪರಿಚಿತರು ಆನ್‌ಲೈನ್ ಮೂಲಕ ಅವರ ಖಾತೆಗಳಿಂದ ಹಂತ ಹಂತವಾಗಿ ಒಟ್ಟು ರೂ. 1,56,100ರೂ. ವನ್ನು ವರ್ಗಾಯಿಸಿಕೊಂಡಿದ್ದರು.

ಇದೀಗ ಆರೋಪಿಯನ್ನು ಬಂಧಿಸಿ ಆತನಿಂದ 1,56,100 ರೂ. ವಶಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ