ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್‌ನಲ್ಲಿ ಸಂಭ್ರಮದ ಓಣಂ ಆಚರಣೆ

ಮಂಗಳೂರು : ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್ ಮಂಗಳೂರು ಇಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ವಾಸ್ತುಶಿಲ್ಪಿತಜ್ಞೆಯಾದ ದೀಪಿಕಾ ಎ ನಾಯಕ್‌ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಓಣಂ ಆಚರಣೆಯ ಪ್ರಯುಕ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವರ್ಣರಂಜಿತ ಪೂಕಳಂ ಅನ್ನು ರಚಿಸಿದರು. ಉಪನ್ಯಾಸಕರು ಪೂಕಳಂನ ಸುತ್ತ ತಿರುವಾದಿರ ನೃತ್ಯವನ್ನು ಮಾಡಿದ್ದು, ಇದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತು.

ಈ ಸಂದರ್ಭದಲ್ಲಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರ ಭಟ್ ಹಾಗೂ ಉಪನ್ಯಾಸಕ ವೃಂದದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಅಪ್ತಿ ಆಚಾರ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ

ನಾಗರಿಕ ಸಮಿತಿಯ ನೇತೃತ್ವದಲ್ಲಿ ಅಪರಿಚಿತ ಶವದ ಅಂತ್ಯ ಸಂಸ್ಕಾರ

ದಲಿತ ಚಿಂತಕ ಜಯನ್ ಮಲ್ಪೆಗೆ ರಾಜ್ಯ ಸರಕಾರದಿಂದ ಡಾ|ಬಾಬು ಜಗಜೀವನ ರಾಂ ಪ್ರಶಸ್ತಿ