ಜ.17ರಂದು “ಕಣ್ಣಾಮುಚ್ಚೆ ಕಾಡೇ ಗೂಡೇ“ ಸಿನಿಮಾ ತೆರೆಗೆ

ಮಂಗಳೂರು : ಡಾರ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ತಯಾರಾಗಿರುವ “ಕಣ್ಣಾಮುಚ್ಚೆ ಕಾಡೇ ಗೂಡೇ” ಸಿನಿಮಾ ಜನವರಿ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ವೀರೇಶ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

“ಸಿನಿಮಾದಲ್ಲಿ ಸಸ್ಪೆನ್ಸ್ ಕಥಾ ಹಂದರದ ಜೊತೆಗೆ ತಾಯಿಯ ಸೆಂಟಿಮೆಂಟ್ ಇದೆ. ನವಿರಾದ ಪ್ರೇಮಕತೆ, ಸುಂದರವಾದ ತಾಣಗಳಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. ಸಿನಿಮಾ ಕನ್ನಡಿಗರಿಗೆ ಖಂಡಿತ ಇಷ್ಟವಾಗುತ್ತದೆ. ನಾನು ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ಮಂದಿರಕ್ಕೆ ಬಂದು ಎಲ್ಲರೂ ಸಿನಿಮಾ ನೋಡಿ” ಎಂದರು.

ನಾಯಕನಟ ಅಥರ್ವ ಪ್ರಕಾಶ್ ಮಾತನಾಡಿ, “ನನ್ನ ಮೊದಲ ಸಿನಿಮಾ ತುಳುವಿನ ಚಾಲಿಪೋಲಿಲು, ನಂತರ ನಾನು ಎಂಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇನೆ. ಈ ಸಿನಿಮಾದಲ್ಲಿ ಬಹುತೇಕ ಎಲ್ಲರೂ ತುಳು ಕಲಾವಿದರೇ ಇದ್ದಾರೆ. ಸಿನಿಮಾದ ಕುರಿತು ನನಗೆ ಹೆಚ್ಚಿನ ನಿರೀಕ್ಷೆಯಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು.

ನಾಯಕಿ ಪ್ರಾರ್ಥನಾ ಮಾತಾಡಿ, “ನಾನು ಮಂಗಳೂರ ಹುಡುಗಿ. ಸಿನಿಮಾದಲ್ಲಿ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ತುಳು ರಂಗಭೂಮಿಯ ಬಹುತೇಕ ಕಲಾವಿದರು ಸಿನಿಮಾದಲ್ಲಿದ್ದಾರೆ. ಎಲ್ಲರೂ ಚಿತ್ರತಂಡವನ್ನು ಪ್ರೋತ್ಸಾಹಿಸಿ” ಎಂದರು.

ನಟ ಜ್ಯೋತಿಷ್ ಶೆಟ್ಟಿ ಮಾತಾಡಿ, “ಸಿನಿಮಾದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ನನಗೆ ಸಿನಿಮಾ ಕಥೆ ಇಷ್ಟವಾಯಿತು. ಮಂಗಳೂರಿನ ಮಣ್ಣಿನ ಸೊಗಡು ಈ ಸಿನಿಮಾದಲ್ಲಿದೆ. ಎಲ್ಲರೂ ಸಿನಿಮಾ ನೋಡಿ” ಎಂದರು.

ನಟರಾಜ್ ಸಿನಿಮಾ ನಿರ್ದೇಶನ ಮಾಡಿದ್ದು ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್, ಚಂದ್ರಕಲಾ ರಾವ್, ನಮಿತಾ ಇತರರು ಸಿನಿಮಾದ ಪ್ರಧಾನ ಭೂಮಿಕೆಯಲ್ಲಿರಲಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಅನಿತಾ, ರವಿ ರಾಮಕುಂಜ, ರಾಜೇಶ್ ಸ್ಕೈ ಲಾರ್ಕ್‌, ನಿರ್ಮಾಪಕಿ ಅನಿತಾ ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು

ಷೇರು ಟ್ರೇಡಿಂಗ್‌ ಹೆಸರಲ್ಲಿ 38,53,961 ರೂ. ವಂಚನೆ