ಓಮ್ನಿ -ಕಾರು ಮಧ್ಯೆ ಭೀಕರ ಅಪಘಾತ; ಚಾಲಕನಿಗೆ ಗಂಭೀರ ಗಾಯ

ಕಾರ್ಕಳ : ಓಮ್ನಿ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓಮ್ನಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದ ಗೋಮಟೇಶ್ವರ ಬೆಟ್ಟ ಬಳಿ ಶನಿವಾರ ನಡೆದಿದೆ.

ಗಾಯಾಳುವನ್ನು ಮೂಡುಬಿದಿರೆಯ ಒಂಟಿಕಟ್ಟೆ ನಿವಾಸಿ ಸಂದೇಶ್‌ (35) ಎಂದು ಗುರುತಿಸಲಾಗಿದೆ.

ಜೋಡುಕಟ್ಟೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಓಮ್ನಿ ಮತ್ತು ಕಾರ್ಕಳ ಕಡೆಯಿಂದ ಬರುತ್ತಿದ್ದ ಕಾರು ಮಧ್ಯೆ ಡಿಕ್ಕಿಯಾಗಿದೆ. ಇದರ ಪರಿಣಾಮ ಓಮ್ನಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಒಳಗಡೆ ಲಾಕ್‌ ಆಗಿದ್ದ ಕಾರಣ ಗಾಯಾಳು ಚಾಲಕ ಹೊರಬರಲು ಸಾಧ್ಯವಾಗಿಲ್ಲ.

ತಕ್ಷಣವೇ ಸ್ಥಳೀಯರು ಜಮಾಯಿಸಿದ್ದು ಕಾರ್ಕಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಓಮ್ನಿ ಡೋರ್‌ ಓಪನ್‌ ಮಾಡಲು ಸಾಧ್ಯವಾಗದೆ ಇದ್ದಾಗ ಕಾರ್ಕಳ ಅಗ್ನಿಶಾಮಕದವರನ್ನು ಕರೆಯಿಸಿ ಬೋಲ್ಟ್‌ ಕಟರ್‌ ಮೂಲಕ ಡೋರ್‌ ಓಪನ್‌ ಮಾಡಿ, ಬಳಿಕ ಗಾಯಾಳುವನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ