ತಾಲೂಕು ಸರಕಾರಿ ಆಸ್ಪತ್ರೆ,‌‌ ಆರೋಗ್ಯ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

ಕಾರ್ಕಳ : ತಾಲೂಕು ಸರಕಾರಿ ಆಸ್ಪತ್ರೆ, ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎ. 18ರಂದು ತಾಲೂಕು ಉಸ್ತುವಾರಿ ನೋಡಲ್ ಅಧಿಕಾರಿ ಅಜಯ್ ಭೇಟಿ ನೀಡಿ‌‌ ಪರಿಶೀಲನೆ ನಡೆಸಿದರು.

ಈ ವೇಳೆ‌ ಸೌಲಭ್ಯಗಳು, ಸಿಬ್ಬಂದಿ ವರ್ಗ, ದಾಖಲೆಗಳ ಪರಿಶೀಲನೆ ನಡೆಸಿದ ಅವರು ರೋಗಿಗಳೊಂದಿಗೆ ಮಾತನಾಡಿದರು.

ಈ ಸಂದರ್ಭ ತಹಶಿಲ್ದಾರ್ ಪ್ರದೀಪ್ ಆರ್., ತಾಲೂಕು ಆರೋಗ್ಯ ಅಧಿಕಾರಿ ಸಂದೀಪ್‌ ಕುಡ್ವ, ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ