ಗಂಗೊಳ್ಳಿ ಪಂಚಾಯತ್‌ನಲ್ಲಿ ಮುಸ್ಲಿಂ ಮೌಲ್ವಿಯ ಪ್ರಾರ್ಥನೆಗೆ ಆಕ್ಷೇಪ; ಇಂದು ಗಣಹೋಮ!

ಗಂಗೊಳ್ಳಿ : ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬರು ಪ್ರಾರ್ಥನೆ ನಡೆಸಿದ ವಿಡಿಯೋವನ್ನು ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಕ್ರೋಶ ವ್ಯಕ್ತಪಡಿಸಿವೆ.

ಇಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ – ಎಸ್‌ಡಿಪಿಐ ಅಧಿಕಾರ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸುವ ವೇಳೆ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ ನಡೆಸಿದ್ದರು. ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ಇಲ್ಲಿ ಅಧ್ಯಕ್ಷರಾದರೆ, ಎಸ್‌ಡಿ‌ಪಿ‌ಐ ಬೆಂಬಲಿತ ಸದಸ್ಯ ತಬ್ರೇಜ್ ಎಂಬಾತನಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ ನಡೆಸಲಾಗಿತ್ತು. ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಹಿಂದೂ ಸಂಘಟನೆಗಳಿಗೆ ಸೆಡ್ಡು ಹೊಡೆದಿರುವ ಕಾಂಗ್ರೆಸ್ ಇಂದು ಅದಕ್ಕೆ ಪ್ರತಿಯಾಗಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗಣಹೋಮ ನಡೆಸಿತು. ಪಂಚಾಯತ್ ಅಧ್ಯಕ್ಷೆ ಕಾಂಗ್ರೆಸ್‌ನ ಜಯಂತಿ ನೇತೃತ್ವದಲ್ಲಿ ಗಣಹೋಮ ನಡೆಯಿತು. ಅಂದಹಾಗೆ ಇಲ್ಲಿ ಎರಡು ದಶಕದ ಬಳಿಕ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.

Related posts

ರಾಮಮಂದಿರದಲ್ಲಿ ಕದ್ದ ರಾಮನ ಮೂರ್ತಿಗಳನ್ನು ಹೊಳೆಬದಿಯಲ್ಲಿ ಬಿಟ್ಟುಹೋದ ಕಳ್ಳರು!

ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಹೊಸ ಕೋಚ್‌ಗಳಲ್ಲಿ ಲೋಪ : ದೂರು ನಿವಾರಣೆಗೆ ಸಚಿವರನ್ನು ಭೇಟಿಯಾದ ಸಂಸದ ಕೋಟ

ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೆಎಂಸಿಯಲ್ಲಿ ಬಾಲ್ಯದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ