ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ವತಿಯಿಂದ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ

ಕಾರ್ಕಳ : ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರದ ಆಶಯದಂತೆ 2025‌ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ದಿಟ್ಟ ಸಂಕಲ್ಪದಲ್ಲಿ ಮಾನ್ಯ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನದ ಅಂಗವಾಗಿ ಕಾರ್ಕಳ ತಾಲೂಕಿನ ಆಯ್ದ 11 ಕ್ಷಯರೋಗಿಗಳಿಗೆ ನಿಕ್ಷಯ್ ಮಿತ್ರ ಯೋಜನೆಯ ಮೂಲಕ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ವತಿಯಿಂದ ಪೌಷ್ಟಿಕ ಆಹಾರದ ಕಿಟ್ ಅನ್ನು ವಿತರಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ ಇವರು ಪ್ರಾಸ್ತಾವಿಕ ಮಾತನಾಡಿ ಕ್ಷಯರೋಗ ಹಾಗೂ ನಿಕ್ಷಯ್ ಮಿತ್ರ ಯೋಜನೆಯ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿದರು ಹಾಗೂ ಕ್ಷಯಮುಕ್ತ ಗ್ರಾಮ ಪಂಚಾಯತ್ ಮಾಡಲು ಪೌಷ್ಟಿಕ ಆಹಾರದ ಕಿಟ್ ವಿತರಣೆ ಕೂಡ ಒಂದು ಮಾನದಂಡವಾಗಿದ್ದು ಈ ನಿಟ್ಟಿನಲ್ಲಿ ಕಾರ್ಕಳ ಟೈಗರ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶ್ರೀ ಶಿವಕುಮಾರ್ ಮಾತನಾಡಿ ಪ್ರಧಾನ ಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನದ ಮಹತ್ವ ಹಾಗೂ ಕಾರ್ಕಳ ತಾಲೂಕಿನ ಕ್ಷಯರೋಗದ ಸ್ಥಿತಿ ಗತಿಗಳ ಕುರಿತು ಮಾಹಿತಿ ನೀಡಿದರು. ಕಾರ್ಕಳ ಟೈಗರ್ಸ್ ಕೇಂದ್ರ ಬಿಂದು ಶ್ರೀ ಬೋಳ ಪ್ರಶಾಂತ್ ಕಾಮತ್ ತಂಡದ ಪರವಾಗಿ ಇವರು ಕಾರ್ಕಳ ತಾಲೂಕಿನ ಒಟ್ಟು 11 ಮಂದಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಕ್ಷಯರೋಗ ಮುಕ್ತ ಭಾರತ ಪರಿಕಲ್ಪನೆಗೆ ನಮ್ಮ ತುಂಬು ಸಹಕಾರ ಯಾವಾಗಲು ಇದೆ ಎಂದು ತಿಳಿಸಿದರು.

ಶ್ರೀಮತಿ ರಮಿತ ಶೈಲೇಂದ್ರ ಕಾರ್ಯಕ್ರಮ ನಿರೂಪಿಸಿದರು, ಪ್ರಕಾಶ್ ರಾವ್ ವಂದಿಸಿದರು, ಟೈಗರ್ಸ್ ತಂಡದ ಶೃಂಗಾರ್ ಪ್ರದೀಪ್, ರವಿ ಶೆಟ್ಟಿ, ಶ್ರೀನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಹಾಗೂ ಅರುಣ್ ಅವರು ಉಪಸ್ಥಿತರಿದ್ದರು.

Related posts

ಕನ್ನಡ ಭಾಷೆಯ ಬಗೆಗಿನ ಒಲವು ಎಲ್ಲರಲ್ಲೂ ಮೂಡಬೇಕು – ಜನಾರ್ದನ್ ಕೊಡವೂರು ​

ಮಲಗಿದಲ್ಲೇ ವ್ಯಕ್ತಿ ಮೃತ್ಯು

ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ – ತಪ್ಪಿದ ಭಾರಿ ದುರಂತ