ನಿಟ್ಟೂರು ಹೈಸ್ಕೂಲ್ ಇಂಟರಾಕ್ಟ್ ಪದಗ್ರಹಣ

ಉಡುಪಿ : ರೋಟರಿ ಉಡುಪಿ ಪ್ರಾಯೋಜಿತ ನಿಟ್ಟೂರು ಹೈಸ್ಕೂಲ್ ಇಂಟರಾಕ್ಟ ಕ್ಲಬ್‌ನ ಪದಗ್ರಹಣ ಸಮಾರಂಭವು ನಿಟ್ಟೂರು ಹೈಸ್ಕೂಲ್‌ನಲ್ಲಿ ನೆರವೇರಿತು.

ರೋಟರಿ ಉಡುಪಿ ಅಧ್ಯಕ್ಷ ರೋ. ಗುರುರಾಜ ಭಟ್‌ರವರು ಇಂಟರಾಕ್ಟ್ ಅಧ್ಯಕ್ಷೆ ಯಶಸ್ವಿನಿ ಮತ್ತು ಕಾರ್ಯದರ್ಶಿ ನಿರೀಕ್ಷಾ ಅವರಿಗೆ ಪದಪ್ರಧಾನ ನೆರೆವೆರಿಸಿ ವಿದ್ಯಾರ್ಥಿ‌ಗಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕೆಂದು ಕರೆನೀಡಿ, ಹೊಸತಂಡಕ್ಕೆ ಶುಭಹಾರೈಸಿದರು.

ಇಂಟರಾಕ್ಟ ಅಧ್ಯಕ್ಷೆ ಯಶಸ್ವಿನಿ ತಮ್ಮ ತಂಡದ ಪರಿಚಯ ಮಾಡಿದರು. ವಲಯ ಸೇನಾನಿ ರೋ. ಹೇಮಂತ್ ಯು. ಕಾಂತ್ ಅವರು ‘ಹೋರಾಟದ ಬದುಕಿನಲ್ಲಿ ಮನೋಬಲವೆಂಬ ಜತೆಗಾರ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನುಸೂಯ, ಶಿಕ್ಷಕ ಸಂಯೋಜಕ ಶ್ರೀ ದೇವದಾಸ ಶೆಟ್ಟಿ, ರೋಟರಿ ಉಡುಪಿಯ ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ