ಪಿಲಿಕುಳ ಮೃಗಾಲಯಕ್ಕೆ ಆಗಮಿಸಲಿದೆ ಅನಕೊಂಡ, ಪೆಂಗ್ವಿನ್ ಸೇರಿದಂತೆ ಹೊಸ ಅತಿಥಿಗಳು

ಮಂಗಳೂರು : ಪ್ರಾಣಿ ವಿನಿಮಯ ಯೋಜನೆಯಡಿ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ಗಂಡು ಏಷ್ಯಾಟಿಕ್ ಸಿಂಹ, ಅಳಿವಿನಂಚಿನಲ್ಲಿರುವ ತೋಳ, ಘರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಪಿಲಿಕುಳ ನಿಸರ್ಗಧಾಮಕ್ಕೆ ವಿನಿಮಯ ನಿಯಮದ ಮೂಲಕ ಆಗಮಿಸಲಿದೆ. ಪಿಲಿಕುಳದ ಧೋಳ(ಕಾಡು ನಾಯಿ), ರೆಟಿಕ್ಯುಲೆಟೆಡ್ ಹೆಬ್ಬಾವು, ಮರ ಬೆಕ್ಕು, ಬಿಳಿ ಗರುಡಗಳನ್ನು ಅಲ್ಲಿಗೆ ನೀಡಲಾಗುತ್ತದೆ.

ಬಾಂಬೆನ ಬೈಕುಳ ಮೃಗಾಲಯದಿಂದ ದಕ್ಷಿಣ ಅಮೆರಿಕದ ಮೂಲದ ಪೆಂಗ್ವಿನ್ ಪಕ್ಷಿಗಳನ್ನು ತರಿಸಲಾಗುತ್ತದೆ. ಪಿಲಿಕುಳದಿಂದ ಮಾರ್ಷ ಮೊಸಳೆಗಳನ್ನು ಬದಲಿಗೆ ನೀಡಲಾಗುತ್ತದೆ. ಮದ್ರಾಸ್ ಪ್ರೊಕೊಡೈಲ್‌ಗೆ ಬ್ಯಾಂಕ್‌ನಿಂದ ಹಳದಿ ಅನಕೊಂಡ ಉರಗಗಳು ಆಗಮಿಸಲಿದೆ. ಬದಲಿಗೆ ಸರ್ಪ ಮತ್ತು ವಿಷಕಾರಿ ಹಾವುಗಳನ್ನು ನೀಡಲಾಗುತ್ತದೆ. ಪಂಜಾಬ್‌ನ ಮಹೇಂದ್ರ ಚೌಧರಿ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು, ಘರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಬರಲಿವೆ. ಬದಲಿಗೆ ಧೋಳ (ಕಾಡು ನಾಯಿ), ರೆಟಿಕ್ಯುಲೆಟೆಡ್ ಹೆಬ್ಬಾವು, ಮುಸಕೋವಿ ಬಾತುಕೋಳಿ ಹಾಗೂ ಕತ್ತೆಕಿರುಬಗಳನ್ನು ನೀಡಲಾಗುತ್ತದೆ.

ತಮಿಳುನಾಡಿನ ವನ್ನಲೂರ್ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು ಹಾಗೂ ಅಪರೂಪದ ಪಕ್ಷಿಗಳನ್ನು ತರಿಸಲಾಗುತ್ತದೆ. ಬದಲಿಗೆ ಕಾಳಿಂಗ ಸರ್ಪ ಮತ್ತು ಹೈನಾ (ಕತ್ತೆಕಿರುಬ)ಗಳನ್ನು ನೀಡಲಾಗುತ್ತದೆ. ಅಂಧ್ರಪ್ರದೇಶದ ತಿರುಪತಿ ಮೃಗಾಲಯದಿಂದ ಅಪರೂಪದ ಪಕ್ಷಿಗಳನ್ನು ತರಿಸಲಾಗುತ್ತದೆ. ಬದಲಿಗೆ ಮರಬೆಕ್ಕು ಇತ್ಯಾದಿ ನೀಡಲಾಗುತ್ತದೆ.

Related posts

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ ಮತ್ತು ಕಿಮೊಥೆರಪಿ ಡೇ ಕೇರ್ ಕೇಂದ್ರದ ಉದ್ಘಾಟನೆ

ಬಾಕಿ ಇರುವ ಮನೆಹಾನಿ, ಬೆಳೆಹಾನಿ ಪರಿಹಾರ ತಕ್ಷಣ ವಿತರಿಸಿ – ಅಧಿಕಾರಿಗಳಿಗೆ ಎಡಿಸಿ ಸೂಚನೆ

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್