ವಿಶ್ವ ದರ್ಜೆಯ ಸೌಲಭ್ಯವುಳ್ಳ ಆರೋಗ್ಯ ಸೇವೆಗಳನ್ನು ಒದಗಿಸಲು ಶಂಕರನಾರಾಯಣದಲ್ಲಿ ಹೊಸ ಚಾರಿಟೇಬಲ್ ಆಸ್ಪತ್ರೆ

ಕುಂದಾಪುರ : ಕುಂದಾಪುರದ ಶಂಕರನಾರಾಯಣದಲ್ಲಿರುವ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯು ವಿಶ್ವದರ್ಜೆಯ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಭಾನುವಾರ (ಡಿಸೆಂಬರ್‌ 8)ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಎನ್‌ಸಿ ಕಾರ್ಯಾಧ್ಯಕ್ಷ ಡಾ.ಎನ್ ಸೀತಾರಾಮ ಶೆಟ್ಟಿ, ಪ್ರಖ್ಯಾತ ಆರೋಗ್ಯ ತಜ್ಞರುಗಳಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಅಧ್ಯಕ್ಷರು, ನಾರಾಯಣ ಹೆಲ್ತ್ ಸಂಸ್ಥೆ, ಮಣಿಪಾಲ್ ಹಾಸ್ಪಿಟಲ್ಸ್ ಅಧ್ಯಕ್ಷರಾದ ಡಾ. ಎಚ್. ಸುದರ್ಶನ್ ಬಲ್ಲಾಳ್, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ನಾರಾಯಣ ನೇತ್ರಾಲಯ ಇದರ ನಿರ್ವಹಣೆ ಮಾಡಲಿದ್ದು ಅದರ ಕೊಡುಗೆಯ ಭಾಗವಾಗಿ ವಿಸ್ತಾರವಾದ ಸೌಲಭ್ಯವುಳ್ಳ ಕಣ್ಣಿನ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯು ಹೊಂದಿದ್ದು ಉತ್ತಮ ಚಿಕಿತ್ಸೆ ಒದಗಿಸಲು ಆಸ್ಪತ್ರೆಯು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.

ಶಂಕರನಾರಾಯಣದಲ್ಲಿ ಕಣ್ಣಿನ ಆಸ್ಪತ್ರೆಯ ಸ್ಥಾಪನೆಯನ್ನು ಮೂಲತಃ ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ (ಎಸ್‌ಎನ್‌ಸಿ) ಪ್ರೈವೇಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಎನ್. ಸೀತಾರಾಮ್ ಶೆಟ್ಟಿ ಅವರ ಸಿಎಸ್‌ಆರ್ ಉಪಕ್ರಮದ ಅಡಿಯಲ್ಲಿ ಕಲ್ಪಿಸಲಾಗಿದೆ. ಇದನ್ನು ಅವರ ಹಿರಿಯ ಸಹೋದರ, ನಾರಾಯಣ ನೇತ್ರಾಲಯ ಗ್ರೂಪ್ ಆಫ್ ಹಾಸ್ಪಿಟಲ್ಸ್‌ ಸಂಸ್ಥಾಪಕ ದಿವಂಗತ ಡಾ. ಭುಜಂಗ ಶೆಟ್ಟಿ ಅವರು ಬೆಂಬಲಿಸಿದ್ದರು.

ಎಸ್‌ಎನ್‌ಸಿ ಕಾರ್ಯಾಧ್ಯಕ್ಷ, ಡಾ.ಎನ್ ಸೀತಾರಾಮ ಶೆಟ್ಟಿ ಅವರು ಮಾತನಾಡುತ್ತಾ, ಜನಸಾಮಾನ್ಯರು ತಮ್ಮ ಮತ್ತು ಸಮುದಾಯದ ಆರೋಗ್ಯಕರ ಭವಿಷ್ಯವನ್ನು ಬೆಂಬಲಿಸಲು ಯಾವುದೇ ವೆಚ್ಚವಿಲ್ಲದ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ” ಎಂದು ಹೇಳಿದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್